ತುಮಕೂರು: ಇಂದು ದಾಖಲೆಯ 16 ನೇ ಬಜೆಟ್ ಅನ್ನು 2025-26 ನೇ ಸಾಲಿಗೆ ಮಂಡಿಸಿದ್ದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ, ತುಮಕೂರು ನಗರದ ವಾಣಿಜ್ಯದ್ಯೋಮಿ, ತುಮಕೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ನಾ ನಿಕಟ ಪೂರ್ವ ಅಧ್ಯಕ್ಷರು ಹಾಗೂ ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ನಿರ್ದೇಶಕರು ಆದ ಟಿ ಜೆ ಗಿರೀಶ್ ರವರು ಅಭಿನಂದಿಸಿ, ಇಂದಿನ ಬಜೆಟ್ ಬಗ್ಗೆ ಕೆಲವು ಅನಿಸಿಕೆಗಳನ್ನು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಬಜೆಟ್ 4.09 ಲಕ್ಷ ಕೋಟಿಯ ಗಾತ್ರ ಎಂದು ತಿಳಿದು ಬಂದಿದೆ. ದೈನಂದಿನ ಜೀವನದಲ್ಲಿ ಸಾರ್ವಜನಿಕರ ವಾಣಿಜ್ಯ ಉದ್ಯಮಿಗಳ ಕೈಗಾರಿಕಾದಮಿಗಳ ಕುಂದು ಕೊರತೆ ಕಷ್ಟ ಸುಖ ಮುಂತಾದವನ್ನು ಪತ್ರಿಕೆ ಹಾಗೂ ಮಾಧ್ಯಮದ ಮೂಲಕ ಸರ್ಕಾರಕ್ಕೆ ಮತ್ತು ಇತರಿಗೆ ತಿಳಿಸುತ್ತಿರುವ ಪತ್ರಕರ್ತರಿಗೆ 15000 ಮಾಸಾಶನ ಏರಿಕೆ ಹಾಗೂ 5 ಲಕ್ಷವರೆಗೂ ನಗದು ರಹಿತ ಚಿಕಿತ್ಸೆ ಬಹಳ ಉಪಯೋಗವಾಗುತ್ತದೆ ಎಂದು ತಿಳಿಸಲು ಇಚ್ಛಿಸುತ್ತೇನೆ.
ಎತ್ತಿನಹೊಳೆ 241ನೆ ಕಿಲೋಮೀಟರ್ ವರೆಗೂ ನೀರು ಹರಿಸುವುದರಿಂದ ತುಮಕೂರು ಜಿಲ್ಲೆಗೆ ಅನುಕೂಲವಾಗುವ ನಿರೀಕ್ಷೆ ಇದೆ ಹಾಗೂ ಎತ್ತಿನಹೊಳೆ ಯೋಜನೆಗೆ 533 ಕೋಟಿ ಕೊರಟಗೆರೆ ಮತ್ತು ಮಧುಗಿರಿ ಕೆರೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರಿ ಕಚೇರಿಯಲ್ಲಿ ಹಾಜರಾತಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ AI ಅಳವಡಿಸುವುದು ಪ್ರಯೋಜನಕಾರಿ ಆಗುವುದೆಂದು ಭಾವಿಸಬಹುದು, ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿ ವಿದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಅಂತರಾಷ್ಟ್ರೀಯ ಉದ್ಯೋಗ ಮೇಳ ಜಾರಿ ಮಾಡುವುದು ಸ್ವಾಗತ ರಾಜ್ಯ ಹೆದ್ದಾರೆ ರಸ್ತೆ ಹಾಗೂ ಜಿಲ್ಲೆಗಳ ರಸ್ತೆ ಅಭಿವೃದ್ಧಿ ಗಾಗಿ 4848 ಕೋಟಿ ಸಾಕಾಗುವುದಿಲ್ಲ ಎಂದು ಭಾವಿಸುತ್ತೇನೆ.
ಪ್ರತಿ ತಾಲೂಕಿನಲ್ಲಿ ಕೃಷಿ ಕ್ಲಸ್ಟರ್ ಸ್ಥಾಪನೆ. ಡಬಲ್ ಡೆಕ್ಕರ್ ಫೈವ್ ಓವರ್ ನೂತನ ಟೆಕ್ನಾಲಜಿ ಅಳವಡಿಸಿ ಮಾಡುತ್ತಿರುವುದು ಸ್ವಾಗತ. ತುಮಕೂರಿನ ವಸಂತ ನರಸಾಪುರದಲ್ಲಿ ಮಹಿಳಾ ವಸತಿ ನಿಲಯ ಮಾಡುತ್ತಿರುವುದು ಅಲ್ಲಿನ ಮಹಿಳಾ ಕಾರ್ಮಿಕರಿಗೆ ಹಾಗೂ ಇತರರಿಗೆ ಕಾಫಿನಾ, ಅನುಕೂಲವಾಗುವುದು ಹೊಸ ಕೈಗಾರಿಕಾ ನೀತಿ ಅಡಿ ಕೈಗಾರಿಕೆಗಳಿಗೆ ನಿಯಮ ಶರತ್ತು ಸಡಿಲೀಕರಣ ಯಾವ ರೀತಿ ಅನುಕೂಲವಾಗುತ್ತದೆ ಎಂದು ಕಾದು ನೋಡಬೇಕು.

ಒಟ್ಟಾರೆ ನಾವು ನಿರೀಕ್ಷಿಸಿದ ಹಾಗೆ ತುಮಕೂರು ಜಿಲ್ಲೆಗೆ ಐಟಿ ಹಬ್ ನಿರ್ಮಾಣ , ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದು. , ಟ್ರೇಡರ್ಸ್ ಗಳಿಗೆ ಟ್ರೇಡ್ ಲೈಸೆನ್ಸ್ ಅಬಾಲಿಷ್ , ಮೆಟ್ರೋ ರೈಲು ಸಂಪರ್ಕವನ್ನು ವಿಸ್ತರಿಸುವುದು, ಕೋಲ್ಡ್ ಸ್ಟೋರೇಜ್ ಸ್ಥಾಪನೆ , ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವುದು ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ತೆಂಗು, ಹುಣಸೆ, ಮಾವು, ಕಡಲೆಕಾಯಿ, ಹಾಗೂ ಹಲಸು ಉತ್ಪನ್ನಗಳ ಅಭಿವೃದ್ಧಿ ಘಟಕಗಳನ್ನು ಸ್ಥಾಪನೆ , ಟ್ರೆಂಡ್ ಅಂಡ್ ಇಂಡಸ್ಟ್ರಿಗಳಿಗೆ ವೃತ್ತಿ ತೆರಿಗೆಯನ್ನು ರದ್ದು ಮಾಡುವುದು ಹಾಗೂ ಇತರೆ ಬೇಡಿಕೆಗಳನ್ನು ಕೊಟ್ಟಿದ್ದೆವು ಆದರೆ ತುಮಕೂರು ನಗರಕ್ಕೆ ಯಾವುದೇ ರೀತಿಯ ಅನುದಾನ ಹೊಸ ಯೋಜನೆ ಕೊಟ್ಟಿಲ್ಲವೆಂದು ಕಂಡುಬಂದಿರುತ್ತದೆ , ಮುಂದಿನ ವರ್ಷಕ್ಕೆ ಕಾದು ನೋಡುವ ಕೆಲಸವಾಗಿದೆ.