ತುಮಕೂರು– ವಿಶ್ವ ಮಹಿಳೆಯರ ದಿನದ ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎಂಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ. ಅಂಬಿಕಾ ಸಿ. ಮತ್ತು ಸಂಸ್ಥೆಯವರು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ತುಮಕೂರಿನ ಮಂದಾರ ಅಕಾಡೆಮಿ ಸಂಸ್ಥಾಪಕಿ ಮಹಾಲಕ್ಷ್ಮಿ ಎಸ್.ಸಿ. ರವರಿಗೆ ಅಚೀವರ್ಸ್ ಇನ್ ದ ಫೀಲ್ಡ್ ಆಫ್ ಟೀಚಿಂಗ್ ಅಬ್ಯಾಕಸ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.