ತುಮಕೂರು: ನಗರದ ಭಾರತ ಸೇವಾದಳ ಕಛೇರಿ ಯಲ್ಲಿ ಭಾರತ ಸೇವಾದಳ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಡಾ.ನಾ..ಸು ಹರ್ಡಿಕರ್ ಅವರ 136 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸರ್ವ ಧರ್ಮಿಯ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿ ಸೇವಾದಳ ಸಂಸ್ಥಾಪಕರಾದ ಡಾ.ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಲಾಯಿತು.
ಅಧ್ಯಕ್ಷರಾದ ಬಿ.ಜಿ. ವೆಂಕಟೇಗೌಡರವರು ಮಾತನಾಡಿ, ಡಾ ನಾ.ಸು. ಹರ್ಡಿಕರ್ ಅವರು ಸ್ವಾತಂತ್ರ ಪಡೆಯಲು ಚಳುವಳಿಗಳಲ್ಲಿ ತಮ್ಮದೇ ಪಾತ್ರ ವಹಿಸಿ ಸ್ವಾತಂತ್ರ ಪಡೆದ ನಂತರದಲ್ಲೂ ಸಹ ದೇಶದಲ್ಲಿ ಉತ್ತಮ ಆರೋಗ್ಯ ನೀಡುವ ಬಗ್ಗೆ ಅವರ ಕನಸು, ಸಾಧನೆ ಹಾಗೂ ಜೀವನ ಚರಿತ್ರೆ ಬಗ್ಗೆ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಡಾ. ನಾ.ಸು. ಹರ್ಡಿಕರ್ ರವರ ಆದರ್ಶಗಳನ್ನು ಬಿತ್ತುವ ಕಾರ್ಯಕ್ರಮಗಳನ್ನು ಮುಂದಿನ ಸಾಲಿನಲ್ಲಿ ಆಯೋಜಿಸಿ ಯಶಸ್ವಿಗೊಳಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ. ವೆಂಕಟೇಶ್ ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷರಾದ ಜಿ.ವೆಂಕಟೇಶ್, ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಚ್.ಎಸ್. ಕೃಷ್ಣಮೂರ್ತಿ, ಭಾರತ ಸೇವಾದಳ ಜಿಲ್ಲಾ ಕೋಶಾಧ್ಯಕ್ಷ ಕೆ. ನಟೇಶ್, ಭಾರತ ಸೇವಾದಳ ಜಿಲ್ಲಾ ಸಂಘಟಕರು ಎಸ್. ಶಿವರಾಜ್ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.