ತುಮಕೂರು: ಮಾಜಿ ಉಪ ಪ್ರಧಾನಿ ಬಾಬೂ ಜಗಜೀವನರಾಮ್ ಅವರು ಸಾಮಾಜಿಕ ಸಮಾನತೆ ಸಾರಿದ ಮಹಾನ್ ಚೇತನ. ಹಸಿರು ಕ್ರಾಂತಿಯ ಹರಿಕಾರರಾಗಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ ಮಾದರಿ ನಾಯಕ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣಿಸಿದರು.
ಶನಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ನಡೆದ ಬಾಬುಜಗಜೀವನರಾಮ್ ಅವರ 118ನೇ ಜನ್ಮದಿನಾಚರಣೆಯಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ಶಾಸಕರು, ಹೆಚ್ಚು ಕಾಲ ಪಾರ್ಲಿಮೆಂಟಿನಲ್ಲಿ ಕೆಲಸ ಮಾಡಿದ ಬಬೂಜಿ ಅವರು, ಉಪ ಪ್ರಧಾನಿ, ರಕ್ಷಣಾ ಸಚಿವ, ಕೃಷಿ ಸಚಿವ, ಕಾರ್ಮಿಕ ಸಚಿವರಾಗಿ ಈ ದೇಶಕ್ಕೆ ಅಪಾರ ಕೊಡುಗೆ ನೀಡಿದರು. ಆ ಮೂಲಕ ಸಮಾಜ ಸುಧಾರಣೆಗೂ ಶ್ರಮಿಸಿದರು.ಇವರ ತತ್ವ ಆದರ್ಶಗಳು ಅನುಸರಿಸಿಕೊಂಡು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅಧ್ಯಕ್ಷತೆ ವಹಿಸಿದ್ದರು.ವೈ.ಹೆಚ್.ಹುಚ್ಚಯ್ಯ, ಕೇಬಲ್ ಪುಟ್ಟರಾಜು,ಹೆಚ್.ಎ.ಆಂಜನಪ್ಪ, ಅಂಜನಮೂರ್ತಿ, ಧನುಷ್, ಹನುಮಂತರಾಯಪ್ಪ, ಕೆ.ವೇದಮೂರ್ತಿ, ನವಚೇತನ್, ಹೆಚ್.ಎನ್.ಚಂದ್ರಶೇಖರ್, ಸಿದ್ಧಗಂಗಯ್ಯ, ಮಲ್ಲಿಕಾರ್ಜುನ್, ಮಂಜುನಾಥ್, ಪ್ರತಾಪ್‌ಕುಮಾರ್, ಪುಟ್ಟರಾಜು, ಬನಶಂಕರಿಬಾಬು,ಕೊಪ್ಪಲ್ ನಾಗರಾಜು, ಗಾಯತ್ರಿ, ವಸಂತ, ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.
-ಕೆ.ಬಿ.ಚಂದ್ರಚೂಡ್