ತುಮಕೂರು: ಸತತ 8ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಟಿ.ಜೆ.ಗಿರೀಶ್ ರವರ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವೈಬ್ರೈಟ್ ಮೈಸೂರಿನೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, 2025-26 ನೇ ಸಾಲಿನ ಬಜೆಟ್ ನಲ್ಲಿ ಭಾರತೀಯ ಅಂಚೆಯನ್ನು ಪ್ರಮುಖ ಲಾಜಿಸ್ಟಿಕ್ಸ್ ಆಗಿ ಮಾಡುವುದು ಒಳ್ಳೆಯ ನಿರ್ಧಾರ.36 ಜೀವ ಉಳಿಸುವ ಔಷಧಿಗಳ ಮೇಲಿನ ಕಸ್ಟಮ್ಸ್ ಅನ್ನು ತೆಗೆದುಹಾಕಲಾಗಿದೆ,ಸಣ್ಣ ಪುಟ್ಟ ಕೆಲಸಗಾರರಿಗೆ ಆರೋಗ್ಯ ವಿಮೆ ಮಾಡಿಸುವುದು ಮತ್ತು ಸಾಕಷ್ಟು ಹೊಸ ಉದ್ಯೋಗ ಸೃಷ್ಟಿಗೆ ಹೊತ್ತು ಕೊಟ್ಟಿರುವುದು, 5.7 ಕೋಟಿ ಕಾರ್ಮಿಕ ಆಧಾರಿತ ಎಂ ಎಸ್ ಎಮ್ ಇ ಗಳಿಗೆ ವಿಶೇಷ ಯೋಜನೆ, ಹಾಗೂ ರಫ್ತು ಮಾಡುವ ಎಂಎಸ್‌ಎಂಇ ಗಳಿಗೆ 2೦ ಕೋಟಿಯವರೆಗೆ ಸಾಲ ಸೌಲಭ್ಯ, ಡಿಜಿಟಲ್ ವ್ಯಾಪಾರ ವೃದ್ಧಿಗಾಗಿ ಕ್ರೆಡಿಟ್ ಕಾರ್ಡ್ ಕೊಡುವ ಮೂಲಕ ಉತ್ತೇಜನ,12 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರಿಗೆ ಒಂದು ಲಕ್ಷ ಹೆಚ್ಚಿನ ಆದಾಯ ತೆರಿಗೆ ವಿನಾಯಿತಿ, ಬಾಡಿಗೆಯಲ್ಲಿ ಟಿಡಿಎಸ್ ಮಾಡುವವರಿಗೆ ವಾರ್ಷಿಕ 2.40 ಲಕ್ಷ ದಿಂದ 6 ಲಕ್ಷಕ್ಕೆ ಏರಿಸಿರುವುದು ಅನುಕೂಲವಾಗಿದೆ. ಟಿಸಿಎಸ್ ಹಣ ಕಟ್ಟುವಲ್ಲಿ ತಡವಾದರೆ ಪೆನಾಲ್ಟಿ ಯಿಂದ ಮುಕ್ತಿ ಇನ್ನು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿರುವುದು ಕಂಡು ಬಂದಿದೆ. ಅಂದು ಕೊಂಡಂತೆ ತುಮಕೂರು ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೆಜ್ ಹಾಗೂ ಪ್ರಾತಿನಿಧ್ಯವನ್ನು ನೀಡಿಲ್ಲ, ಈ ಬಜೆಟ್ ಜನಸಾಮಾನ್ಯರ, ಮಧ್ಯಮ ವರ್ಗದವರ ಬಜೆಟ್ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
-ಕೆ.ಬಿ.ಚಂದ್ರಚೂಡ್