ಎಚ್.ಡಿ.ಕೋಟೆ : ತಾಲೂಕಿನ ಹುಣಸೆಕುಪ್ಪೆ ಹಾಡಿಯ ಸುರೇಶ (41) ತಾರಕ ನದಿಯಲ್ಲಿ ಮೀನು ಹಿಡಿಯಲು ಹೋಗಿ ಕಾಲುಜಾರಿ ಬಿದ್ದು ಗುರುವಾರ ಮೃತಪಟ್ಟಿರುವ ಘಟನೆ ನಡೆದಿದೆ.
ತಾರಕ ನದಿಯ ಬಳಿ ತೆರಳಿದ್ದ ಸಂದರ್ಭದಲ್ಲಿ ಕಾಲು ಜಾರಿದ್ದು ನದಿಗೆ ಸುರೇಶ ಬಿದ್ದಿದ್ದಾನೆ. ಈಜಲು ಬಾರದೆ ಇದ್ದುದರಿಂದ ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾನೆ.

ಪೊಲೀಸರು ಶವವನ್ನ ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
– ಶಿವಕುಮಾರ