ತುಮಕೂರು- ಫೆ.14 ರಿಂದ 16ರವರೆಗೆ-ಬೆಳ್ಳಾವಿ-ಕಾರದ-ಮಠದಲ್ಲಿ ಕರ್ತೃ-ಗದ್ದುಗೆ-ಲೋಕಾರ್ಪಣೆ-ಪೂಜಾ-ಧಾರ್ಮಿಕ-ಮತ್ತು-ಸಾಂಸ್ಕೃತಿಕ-ಕಾರ್ಯಕ್ರಮ

ತುಮಕೂರು: ತಾಲ್ಲೂಕಿನ ಬೆಳ್ಳಾವಿಯ ಕಾರದ ಮಠದಲ್ಲಿಕಾರದ ಮಹಾಶಿವಯೋಗಿಗಳ ಕರ್ತೃಗದ್ದುಗೆ ಲೋಕಾರ್ಪಣೆಯ ಅಂಗವಾಗಿ ಈ ತಿಂಗಳ 14 ರಿಂದ 16 ವರೆಗೆ ವಿವಿಧ ಧಾರ್ಮಿಕ, ಸೇವಾ ಕಾರ್ಯಕ್ರಮಗಳನ್ನು ಕಾರದ ಶಿವಯೋಗಿಗಳ ಸೇವಾ ಸಮಿತಿ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಕಾರದ ಮಠದ ಅಧ್ಯಕ್ಷರಾದ ಶ್ರೀ ಕಾರದ ವೀರಬಸವ ಸ್ವಾಮೀಜಿ ಶ್ರೀ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಠಗಳ ಸೇವೆ ಅನನ್ಯವಾದದ್ದು.ಅನ್ನ, ಜ್ಞಾನ, ಆಶ್ರಯಕೊಡುತ್ತಾ ಬಂದಿರುವ ಮಠಗಳು ಭಾರತೀಯ ಪರಂಪರೆಯಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿವೆ. ಬೆಳ್ಳಾವಿ ಕಾರದ ಮಠವೂ ಇದೇ ಸೇವಾ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದೆ ಎಂದರು.

ಕಾರದ ಮಠದ ಕರ್ತೃ ಕಾರದ ಶಿವಯೋಗಿ ಸ್ವಾಮೀಜಿಗಳು ತಮ್ಮ ಪವಾಡದಿಂದಲೇ ಪ್ರಸಿದ್ಧರಾಗಿದ್ದರು.ಪೂಜ್ಯರು ಒಣ ಮೆಣಸಿನಕಾಯಿ, ಬಿಲ್ವಪತ್ರೆ, ಬೆಳ್ಳುಳ್ಳಿ ಮುಂತಾದ ಕಾರದ ಪದಾರ್ಥಗಳನ್ನ ತಿನ್ನುತ್ತಿದ್ದ ಕಾರಣ ಅವರು ಕಾರದಯ್ಯ, ಕಾರದ ತಾತಾ ಎಂದು ಭಕ್ತ ವಲಯದಲ್ಲಿ ಮನೆಮಾತಾಗಿದ್ದರು. ಅದು ಮುಂದುವರೆದು ಈ ಮಠಕಾರದ ಮಠವೆಂದು ಪ್ರಸಿದ್ಧಿ ಪಡೆದಿದೆ.ಕಾರದ ಶಿವಯೋಗಿಗಳ ಪವಾಡಗಳ ಬಗ್ಗೆ ಹಲವಾರು ಪ್ರಕರಣಗಳು ಜನರ ಬಾಯಿಂದ ಬಾಯಿಗೆ ಮುಂದುವರೆದು ಬಂದಿವೆ.

1908 ರಲ್ಲಿ ಶಿವಯೋಗಿಗಳು ಲಿಂಗೈಕ್ಯರಾದರು.ತಾವು ಇಲ್ಲಿಗೆ ನೂರು ವರ್ಷಗಳ ನಂತರ 2008 ರಲ್ಲಿ ಮಠ ಪಟ್ಟಾಧಿಕಾರ ಸ್ವೀಕಾರ ಮಾಡಿ, ಮಠದ ಪರಂಪರೆ ಮುಂದುವರೆಸಲಾಗುತ್ತಿದೆ. ಪೂಜ್ಯರು ಲಿಂಗೈಕ್ಯರಾದ 116 ವರ್ಷಗಳ ನಂತರ ಅವರ ಕರ್ತೃ ಗದ್ದುಗೆ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗುತ್ತಿದೆಎಂದು ಹೇಳಿದರು.


ದೊಡ್ಡ ವ್ಯಾಪಾರತಾಣವಾಗಿದ್ದ ಬೆಳ್ಳಾವಿಯಲ್ಲಿ 101 ದೇವಸ್ಥಾನ, 101 ಬಾವಿ ಇದ್ದವು. 101 ಜಾತ್ರೆಗಳು ನಡೆಯುತ್ತಿದ್ದವು.ಶ್ರೀಮಂತರು ಬಡವರನ್ನು ಹಿಂಸಿಸುತ್ತಿದ್ದ ಆ ಕಾಲದಲ್ಲಿ ಶಿವಯೋಗಿಳು ಶ್ರೀಮಂತರ ದರ್ಪದ ವಿರುದ್ಧ ಸಿಟ್ಟಿಗೆದ್ದು ‘ಮಂಡಿಗಳೆಲ್ಲಾ ಗುಂಡಿಗಳಾಗಲಿ, ಗುಂಡಿಯ ಮೇಲೆ ರಥ ಹರಿಯಲಿ’ಎಂದು ಶಾಪ ಕೊಟ್ಟಿದ್ದರು ಎಂದು ಶ್ರೀಗಳ ಪವಾಡ ಸ್ಮರಿಸಿದರು.


೧೫ರಂದು ನಡೆಯುವಕಾರ್ಯಕ್ರಮದಲ್ಲಿ ಕರ್ತೃ ಗದ್ದುಗೆಯ ವಿಮಾನಗೋಪುರ ಕಳಸ ಪ್ರತಿಷ್ಠಾಪನೆ,ಆವರಣದಲ್ಲಿ ಸ್ಥಾಪನೆ ಮಾಡುವ ೧೦೮ ಶಿವಲಿಂಗಗಳಿಗೆ ಸಂಸ್ಕಾರಾದಿ ಕಾರ್ಯಗಳು, ಗದ್ದುಗೆಗೆ ಧನಾದಿವಾಸ, ಪುಷ್ಪದಿವಾಸ, ರುದ್ರಾಭಿಷೇಕ, ಕ್ಷೀರಾಭಿಷೇಕ ನೆರವೇರಲಿದೆ.ಈ ಪುನರ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿದ್ಧರಬೆಟ್ಟ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ, ತುಮಕೂರು ರಾಮಕೃಷ್ಣ ವಿವೇಕಾನಂದ ಸರಸ್ವತಿ ಸ್ವಾಮೀಜಿ, ಕುಂಚಿಟಿಗರ ಮಠದ ಹನುಮಂತನಾಥ ಸ್ವಾಮೀಜಿ, ಬೆಟ್ಟದ ಹಳ್ಳಿ ಗವಿಮಠದಚಂದ್ರಶೇಖರ ಸ್ವಾಮೀಜಿ ಭಾಗವಹಿಸುವರು ಎಂದು ಕಾರದ ವೀರಬಸವ ಸ್ವಾಮೀಜಿ ಹೇಳಿದರು.


ಸಮಿತಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ,ಇದೇ ೧೪ರಂದು ಬೆಳಿಗ್ಗೆ ಕಾರದ ವೀರಬಸವ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವರು.ಸಂಜೆ ೪ ಗಂಟೆಗೆ ಗಂಗಾಪೂಜೆ, ಕುಂಭೋತ್ಸವ ನಡೆಯಲಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸುವರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು ಭಾಗವಹಿಸುವರು ಎಂದರು.


೧೬ರAದು ಭಾನುವಾರ ಬೆಳಿಗ್ಗೆ ೧೦೮ ಶಿವಲಿಂಗಗಳ ಸಹಿತ ಮಹಾಗಣಪತಿ, ನಂದೀಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಠಾನ, ಲಘುನ್ಯಾಸ ಪೂರ್ವಕರುದ್ರಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಮಠಗಳ ಸ್ವಾಮೀಜಿಗಳು ಈ ಪೂಜಾ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವರು.ಕೇಂದ್ರ ಜಲಶಕ್ತಿ ಮತ್ತು ರೈಲ್ವೆಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಬಿ.ಸುರೇಶ್‌ಗೌಡ ಮೊದಲಾದವರು ಭಾಗವಹಿಸುವರು ಎಂದು ಹೇಳಿದರು.


ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಇತಿಹಾಸ ಪ್ರಸಿದ್ಧ ಬೆಳ್ಳಾವಿ ಕಾರದ ಮಠದತನ್ನದೇಆದ ವಿಶಿಷ್ಠ ಪರಂಪರೆಯನ್ನು ಹೊಂದಿದೆ. ಜಾತಿಬೇಧವಿಲ್ಲದೆಎಲ್ಲರನ್ನೂ ಒಳಗೊಳ್ಳುವ ಮಠವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ, ಸೇವಾ ಕಾರ್ಯಗಳನ್ನುಕಾರದ ವೀರಬಸವ ಸ್ವಾಮೀಜಿಗಳು ಮುಂದುವರೆಸಿದ್ದಾರೆ ಎಂದರು.


ಈ ವೇಳೆ ಷಣ್ಮುಖಪ್ಪ, ಎಂ.ಎಸ್.ಉಮೇಶ್, ಟಿ.ಆರ್.ಸದಾಶಿವಯ್ಯ, ಟಿ.ಎಸ್.ಗಟ್ಟಿ, ಮೃತ್ಯುಂಜಯ, ಮಹೇಶ್ ಮೊದಲಾದವರು ಹಾಜರಿದ್ದರು.

  • ಕೆ.ಬಿ.ಚಂದ್ರಚೂಡ್

Leave a Reply

Your email address will not be published. Required fields are marked *

× How can I help you?