ತುಮಕೂರು-ಮಕ್ಕಳಿಗೆ ಸಂಸ್ಕಾರ ನೀಡಿ,ದುಶ್ಚಟ ದುರಭ್ಯಾಸಗಳಿಂದ ದೂರವಿಡಿ-ವಿವೇಕ್ ವಿನ್ಸೆಂಟ್ ಪೈಸ್

ತುಮಕೂರು: ಮಕ್ಕಳು ಈ ದೇಶದ ನಿಜವಾದ ಆಸ್ತಿ,ಅವರಿಗೆ ಕಾಲ ಕಾಲಕ್ಕೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರ ನೀಡಿ ಅವರನ್ನು ಜವಾಬ್ದಾರರನ್ನಾಗಿ ಮಾಡಬೇಕಾದ ಹೊಣೆಗಾರಿಕೆ ತಂದೆ-ತಾಯಿಗಳ ಮೇಲಿದೆ, ಹದಿಹರಿಯದಲ್ಲಿನ ಒತ್ತಡಗಳು, ತಂದೆ-ತಾಯಿಯರ ಒತ್ತಡ, ಸ್ನೇಹಿತರ ಒತ್ತಡ ಮತ್ತು ಜೀವನಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ‍್ಯ, ಲಿಂಗ ತಾರತಮ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ,ಸಹವಾಸ ಪ್ರವೃತ್ತಿ, ಸಕಾರಾತ್ಮಕ ಚಿಂತನೆಗಳು ಈ ಎಲ್ಲಾ ಸಮಸ್ಯೆಗಳಿಗೆ ವ್ಯಸನಗಳೇ ಮುಖ್ಯ ಕಾರಣ.

ಸಮಾಜದಲ್ಲಿ ಮಾದಕ ವಸ್ತುಗಳಿಂದ ಆಗುತ್ತಿರುವಂತಹ ಅನಾನುಕೂಲಗಳು ಮತ್ತು ಅಹಿತರ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ಮೇಲಿದೆ, ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು, ಕಾಲೇಜು ಶಿಕ್ಷಣ ವ್ಯವಸ್ಥೆಯ ವಿದ್ಯಾರ್ಥಿಗಳು, ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಆಯಾ ವಯಸ್ಸಿಗೆ ಅನುಗುಣವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ವಿಚಾರಗಳನ್ನು ಬಹಳ ಸಂಕ್ಷೀಪ್ತವಾಗಿ ತಿಳಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ನ ಅಖಿಲ ಕರ್ನಾಟಕ ಜನಜಾಗೃತಿವೇದಿಕೆ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪೈಸ್ ರವರು ತಿಳಿಸಿದರು.

ಅವರು ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ತುಮಕೂರು-1 ಜಿಲ್ಲಾ ಕಛೇರಿ ವ್ಯಾಪ್ತಿಯ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ತರಬೇತುದಾರರಿಗೆ ತರಬೇತಿ ಹಾಗೂ ತುಮಕೂರು -1 ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರ ಸಭೆಯನ್ನು ಜಿಲ್ಲಾ ಕಛೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಜನಜಾಗೃತಿ ವೇದಿಕೆಯ ಹುಟ್ಟು ಮತ್ತು ಬೆಳವಣಿಗೆ ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು,2025-26ನೇ ಸಾಲಿನಲ್ಲಿ ಜಿಲ್ಲಾ ಕಚೇರಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಅಮರನಾಥ್ ಶೆಟ್ಟಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಆಗುತ್ತಿರುವ ಕಾರ್ಯಕ್ರಮಗಳು, ಶ್ರೀಕ್ಷೇತ್ರದಿಂದ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು,ಅದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ತಿಮ್ಮಯ್ಯನಾಯ್ಕ, ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಪ್ರಭಾ ಶೆಟ್ಟಿ,ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ್,ಪ್ರಭಾಕರ್ ರಾಮ್ ನಾಯಕ್, ಉದಯ್, ಸುರೇಶ್, ಶ್ರೀಮತಿ ಜಯಂತಿ, ಎಂ.ಎಸ್.ದರ್ಶನ್, ರಾಜೇಶ್, ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ಹಾಜರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *