ತುಮಕೂರು: ಧರ್ಮಸ್ಥಳದ ಧರ್ಮಾಧಿಕಾರಿಗಳ ಧರ್ಮಪತ್ನಿಯವರು ಮತ್ತು ರಾಜ್ಯ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಹೆಗ್ಗಡೆರವರ ಹುಟ್ಟುಹಬ್ಬದ ಪ್ರಯುಕ್ತ ಮೈದಾಳ ಕಾರ್ಯಕ್ಷೇತ್ರದ ಮಹಾಲಕ್ಷ್ಮಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕಸ್ತೂರಬಾ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ಡಾ||ಶಿವಕುಮಾರ್, ಮಾನ್ಯ ತುಮಕೂರು ತಾಲ್ಲೋಕಿನ ಯೋಜನಾಧಿಕಾರಿ ಪ್ರಭಾಕರ್‌ರಾಮ್ ನಾಯಕ್ ರವರುಗಳು ಜಂಟಿಯಾಗಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುತ್ತಿರುವಂತಹ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ,ವಾತ್ಸಲ್ಯ ಕಾರ್ಯಕ್ರಮಗಳ ಬಗ್ಗೆ, ಜನಮಂಗಲ ಕಾರ್ಯಕ್ರಮಗಳ ಬಗ್ಗೆ ಅಲ್ಲಿಯ ಸದಸ್ಯರಿಗೆ ತುಂಬಾ ಉತ್ತಮವಾದ ಮಾಹಿತಿಯನ್ನು ನೀಡಿದರು.

ಈ ವೇಳೆ ತೇಜಸ್ವಿನಿ, ಮಹಾಲಕ್ಷ್ಮಿ ವೃದ್ಧಾಶ್ರಮದ ವ್ಯವಸ್ಥಾಪಕರು, ಒಕ್ಕೂಟದ ಅಧ್ಯಕ್ಷ ರಾಜಪ್ಪ, ವಲಯದ ಮೇಲ್ವಿಚಾರಕ ಹೆಚ್.ಎಸ್.ಲೋಕೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಾಗಮಣಿ, ಸೇವಾ ಪ್ರತಿನಿಧಿ ಸಿದ್ದಮ್ಮ, ಕಸ್ತೂರಬಾ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
– ಕೆ.ಬಿ.ಚಂದ್ರಚೂಡ