ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ನ್ನು ತನಿಖೆಗೆ ಹಾಲಿ ಉಚ್ಛನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಸಿಬಿಐ ಗೆ ಒಪ್ಪಿಸಿದರೆ ನಿಜಾಂಶ ಹೊರೆಗೆ ಬರಲಿದೆ.
ನಿನ್ನೆ ನಡೆದ 16 ಶಾಸಕರ 6 ತಿಂಗಳ ಸಸ್ಪೆಂಡ್ ನ್ನು ವಿರೋಧಿಸಿದ ಶಾಸಕರು ಸ್ಪೀಕರ್ ರವರು ಆಡಳಿತ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುತ್ತಿಲ್ಲ,ಬೆಳಿಗ್ಗೆ ಯಾರೋ ಸ್ಪೀಕರ್ ರವರಿಗೆ 2 ಬಾರಿ ಅವರ ಕಿವಿಗೆ ಏನೋ ಹೇಳಿ ಬಂದರು ತದನಂತರ ಸ್ಪೀಕರ್ ರವರು ನಮ್ಮ ಪಕ್ಷದ 16 ಶಾಸಕರನ್ನು 6 ತಿಂಗಳವರೆಗೆ ಸಸ್ಪೆಂಡ್ ಮಾಡಿದ್ದು ಜನಪ್ರತಿನಿಧಿಗಳಿಗೆ ಶೋಭೆ ತರುವಂತದ್ದಲ್ಲ ಹಾಗಾದರೆ ಆಡಳಿತ ಪಕ್ಷವನ್ನು ಪ್ರಶ್ನೆ ಮಾಡುವಂತಿಲ್ಲವೇ? ಅವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಕೆ.ಎನ್.ರಾಜಣ್ಣರವರ ಹನಿಟ್ರ್ಯಾಪ್ ಬಗ್ಗೆ ನಾವು ಪ್ರಶ್ನೆ ಮಾಡಿ ಅವರ ನೆರವಿಗೆ ಧಾವಿಸಿದ್ದು ತಪ್ಪೇ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಕಾಂಗ್ರೆಸ್ ಮೇಲೆ ಮುಗಿಬಿದ್ದರು.
ಇದೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾಪೋಷಿತ ನಾಟಕ ಮಂಡಳಿ ಇದ್ದ ಹಾಗೆ ಕೆ.ಎನ್.ರಾಜಣ್ಣನವರು ಕಾಂಗ್ರೆಸ್ ಹೈಕಮಾಂಡನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ 5 ವರ್ಷ ಇರುತ್ತಾರೆ ಎಂದು ಹೇಳಿದ್ದು ಕೆಲವರಿಗೆ ಕಣ್ಣು ಕೆಂಪಾಗಿಸಿದ್ದು ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಸಂಚು ರೂಪಿಸಿದ್ದಾರೆ,ಮುಖ್ಯಮಂತ್ರಿಗಳು ಸಹ ಇದರ ಹಿಂದಿದ್ದಾರಾ,ರಾಜಣ್ಣನವರುಮುಖ್ಯಮಂತ್ರಿಗಳ ಪರ ಮಾತಾಡಿ ಅಪಾಯಕ್ಕೆ ಸಿಲುಕಿದ್ದಾರಾ ಎಂದು ಪ್ರಶ್ನಿಸಿ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಾಗಾಗಿ ಉಚ್ಛನ್ಯಾಯಾಲಯದ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐ ನಿಂದ ತನಿಖೆ ನಡೆದರೆ ಮಾತ್ರ ಈ ದೇಶಕ್ಕೆ ಸತ್ಯ ತಿಳಿಯುತ್ತದೆ ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

ಮೂಡಾ ಪ್ರಕರಣ ಏನಾಯಿತು ಮೊದಲೇ ಎಲ್ಲರಿಗೂ ಗೊತ್ತಿತ್ತು ಲೋಕಾಯುಕ್ತ ಮುಖ್ಯಮಂತ್ರಿಗಳ ಕೈಯಲ್ಲಿ ಇರುವುದರಿಂದ ಮುಖ್ಯಮಂತ್ರಿಗಳು ನಿರಪರಾಧಿ ಎಂದು ಬಿ ರಿಪೋರ್ಟ್ ಹಾಕಿದರು.
ಬಸನಗೌಡಪಾಟೀಲ್ ಯತ್ನಾಳ್ ರವರಿಗೆ ಯಾರೋ ಚೀಟಿ ತಂದು ಕೊಟ್ಟರು ನಂತರ ಸಹಕಾರ ಸಚಿವರ ಹನಿಟ್ರ್ಯಾಪ್ ಬಗ್ಗೆ ಅವರು ಮಾತನಾಡಿದ್ದು ನಾನು ಕಣ್ಣಾರೆ ನೋಡಿದ್ದೇನೆ,ಇವೆಲ್ಲ ಏನು?ಇದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದರು.ನಮ್ಮನ್ನು 6 ತಿಂಗಳ ಕಾಲ ಸದನದಿಂದ ಸಸ್ಪೆಂಡ್ ಮಾಡಿರುವುದನ್ನು ನ್ಯಾಯಾಲಯದಲ್ಲಿ ಸಹ ಪ್ರಶ್ನಿಸುತ್ತೇವೆ,ಸದನದ ಒಳಗೆ ಮತ್ತು ಹೊರಗೆ ಸ್ಪೀಕರ್ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್,ಪ್ರಭಾಕರ್,ಸಿದ್ದೇಗೌಡ ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ