ತುಮಕೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಬೆಂಗಳೂರು ವಿಭಾಗೀಯ ಸಂಚಾಲಕರನ್ನಾಗಿ ಛಲವಾದಿ ಶೇಖರ್ ಅವರನ್ನು ನೇಮಕ ಮಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ)ರಾಜ್ಯ ಪ್ರಧಾನ ಸಂಚಾಲಕ ಗೋವಿಂದರಾಜು ಆದೇಶಿಸಿದ್ದಾರೆ.
ತುಮಕೂರು ನಗರದ ಛಲವಾದಿ ಶೇಖರ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಒಂಭತ್ತು ಜಿಲ್ಲೆಗಳಿಗೆ ವಿಭಾಗೀಯ ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ಈ ಕೂಡಲೇ ಒಂಭತ್ತು ಜಿಲ್ಲೆಯಾಧ್ಯಂತ ಸಂಘವನ್ನು ಬಲವಾಗಿ ಸಂಘಟಿಸಿ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ರಾಜ್ಯ ಪದಾಧಿಕಾರಿಗಳ ಹಾಗೂ ಸ್ಥಳಿಯ ಮುಖಂಡರ ಮಾರ್ಗದರ್ಶನ, ಸಹಕಾರದೊಂದಿಗೆ ಸಂಘಟನೆ ರಚನೆ ಮಾಡಿ ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.