ತುಮಕೂರು: ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಠಾಣಾ ವ್ಯಾಪ್ತಿಯ ಪಾವಗಡ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ.
ಬೆಂಗಳೂರು ನಿಂದ ಪಾವಗಡಕ್ಕೆ ತೆರಳುತ್ತಿದ್ದ ಚಿತ್ರದುರ್ಗ ಡಿಪೋಗೆ ಸೇರಿದ ಬಸ್ಸು (KA16 F 0024) ಬಸ್ ಹರಿದು ಸ್ಥಳದಲ್ಲಿ ಚಿನ್ನೇನಹಳ್ಳಿ ಗ್ರಾಮದ ನಾರಾಯಣಪ್ಪ(58) ಎನ್ನುವ ವ್ಯಕ್ತಿ ಸಾವು. ಅತಿವೇಗವಾಗಿ ಬಂದ ಬಸ್ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತ ದೈರ್ವೈವಿ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗನಿಂದ ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ನಡೆದ ಸ್ಥಳಕ್ಕೆ ಮಿಡಿಗೇಶಿ ಪಿಎಸ್ಐ ಮೊಹಮ್ಮದ್ ಪೈಗಂಬರ್ ಅಮ್ಮಣಗಿ ಭೇಟಿ ನೀಡಿದಾಗ. ಚಿನ್ನೇನಹಳ್ಳಿ ಗ್ರಾಮಸ್ಥರು ಶವ ಎತ್ತದೇ ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಅಲ್ಲಿಯತನಕ ಶವ ಎತ್ತುವುದಿಲ್ಲ ಎಂದು ಪೋಲಿಸರೋಡನೆ ಕೆಲ ಕಾಲ ವಾಗ್ವಾದಕ್ಕೆ ಇಳಿದು ಪರಿಹಾರ ಕೊಡಿ ಇಲ್ಲವೇ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಸಿಪಿಐ ಹನುಮಂತರಾಯಪ್ಪ ಘಟನೆ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ಸಾಗಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪರಿಹಾರ ನೀಡುವುದಾಗಿ ತಿಳಿಸಿದರು. ಘಟನೆ ನಡದ ಸ್ಥಳಕ್ಕೆ ಆಗಮಿಸಿದ ಮಧುಗಿರಿ ಕೆ ಎಸ್ ಆರ್ ಟಿ ಸಿ ನಿಮಗದ ಅಧಿಕಾರಿ ಮಲ್ಲೇಶ್ ಭೇಟಿ ನೀಡಿ ಮಾತನಾಡಿ ಸರ್ಕಾರದ ಮೂಲಕ ಮೃತ ದೈರ್ವೈವಿಗೆ ಪರಿಹಾರ ಒದಗಿಸಲಾಗುವುದು ಎಂದು ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು.

ನಮ್ಮ ಗ್ರಾಮದಲ್ಲಿ ಹಲವಾರು ಇದೇ ರೀತಿಯ ಪ್ರಕರಣಗಳು ಘಟಿಸುತ್ತಿದೆ ಇಂತಹ ಘಟನೆಗಳಿಗೆ ಮರುಕಳಿಸದಂತೆ ಚಿನ್ನೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಿಂದ ಐವತ್ತು ಮೀಟರ್ ದೂರದಲ್ಲಿ ಎರಡು ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಎಂದು ಸಿಪಿಐ ಹನುಮಂತರಾಯಪ್ಪ ಅವರಲ್ಲಿ ಮನವಿ ಮಾಡಿದರು ಅತೀ ಶೀಘ್ರದಲ್ಲೇ ಎರಡು ಕಡೆ ಉಬ್ಬು ನಿರ್ಮಿಸಿ ಅತಿವೇಗಕ್ಕೆ ಕಡಿವಾಣ ಹಾಕಲಾಗುವುದು ಎಂದು ಗ್ರಾಮಸ್ಥರಿಗೆ ಸಿಪಿಐ ಭರವಸೆ ನೀಡಿದರು.
-SURESH BABU