ತುಮಕೂರು: ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ನೀಡುತ್ತಿರುವ ವಿವಿಧ ಸೌಲ್ಯಗಳನ್ನು ತಲುಪಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕರಾದ ಶ್ರೀಮತಿ ರಕ್ಷಿತಾ ಹೇಳಿದರು.
ಅವರು ಗುರುವಾರದಂದು ತುಮಕೂರು ಜಿಲ್ಲಾ ಲಾರಿ ಮೆಕಾನಿಕ್ ಕ್ಷೇಮಭಿವೃದ್ಧಿ ಸಂಘ (ರಿ) ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳು, ಯೋಜಿತ ಸೌಲಭ್ಯಗಳನ್ನು ನೀಡುತ್ತಿದೆ. ಈ ಕುರಿತು ಕಾರ್ಮಿಕರು ಜಾಗೃತಿ ಹೊಂದಿ, ಇದರ ಪ್ರಯೋಜನ ಪಡೆದುಕೊಳ್ಳಬೇಕು,” ಎಂದ ಅವರು, ಸಂಘದ ಕಚೇರಿಯಲ್ಲಿ ಕಾರ್ಮಿಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸುವ ಬಗ್ಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೊಹಮ್ಮದ್ ಹುಸೇನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಸಾನಿಯಾ ಕೌಸರ್, ಉಪಾಧ್ಯಕ್ಷ ಟಿ.ವಿ ಶ್ರೀನಿವಾಸ್, ಕಾರ್ಯದರ್ಶಿ ಅಫ್ಸರ್ ಖಾನ್, ಜಂಟಿ ಕಾರ್ಯದರ್ಶಿ ಅನ್ಸರ್ ಪಾಷಾ, ಖಜಾಂಚಿ ಮೊಹಮ್ಮದ್ ರಿಯಾಜ್ ಶರೀಫ್ ಹಾಗೂ ನಿರ್ದೇಶಕರಾದ ನವಾಬ್ ಜಾನ್, ಕೌಸರ್ ಪಾಷಾ, ಸಿರಾಜ್ ಖಾನ್, ಮೊಹಮ್ಮದ್ ರಫೀಕ್, ಆರ್ ಕೃಷ್ಣ, ಅಸ್ಲಂ ಪಾಷ ಸೇರಿ ಸಂಘದ ಹಲವಾರು ಸದಸ್ಯರು ಭಾಗವಹಿಸಿದ್ದರು.