ತುಮಕೂರು – ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಭಾರತ ಸರ್ಕಾರದ ಸ್ವಾಮ್ಯತೆಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಬೆಳಕು ಇಂಡೇನ್ ಗ್ರಾಮೀಣ್ ವಿತರಕ್ ಎಂಬ ಹೊಸ ಗ್ಯಾಸ್ ಏಜೆನ್ಸಿ ಯ ಉದ್ಘಾಟನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿದ್ದಾರ್ಥ್ ಅಗ್ಗರ್ ವಾಲ್ ನೆರವೇರಿಸಿದರು ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಆರ್. ಗಣಪತಿ ಸುಬ್ರಮಣಿಯನ್, ಡಿವಿಜ್ಹನ್ ಹೆಡ್ ಐ. ರಮೇಶ್,ವ್ಯವಸ್ಥಾಪಕರಾದ ಹರ್ ದೇವ್ ಸಿಂಗ್ ಬದ್ದಾನ್, ಏಜೆನ್ಸಿಯ ಮಾಲೀಕರಾದ ತನ್ವೀರ್ ರೆಹಮಾನ್ ಖಾನ್, ಯಾಹ್ಯಾ ಖಾನ್, ರೋಹಿತ್ ಪಿ.ಜಿ.ಹಾಗೂ ಜಿಲ್ಲೆಯ ಗ್ಯಾಸ್ ವಿತರಕರು ಹಾಜರಿದ್ದರು.