ತುಮಕೂರು-ಏ.26 ಮತ್ತು 27ರಂದು ಬೃಹತ್ ಎಲ್.ಐ.ಡಿ.ಪರದೆ ಮೇಲೆ ಕ್ರಿಕೆಟ್ ಆಟ ಲೈವ್-ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ತುಮಕೂರು ಇನ್ ಚಾರ್ಜ್ ಸುನಿಲ್ ಪಟೇಲ್‌ ಮಾಹಿತಿ

ತುಮಕೂರು- ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 26 ಮತ್ತು 27ರಂದು ಬೃಹತ್ ಎಲ್.ಐ.ಡಿ.ಪರದೆ ಮೇಲೆ ಕ್ರಿಕೆಟ್ ಆಟವನ್ನು ಲೈವ್ ತೋರಿಸುತ್ತಿದ್ದು, ಈ ಕ್ರಿಕೆಟ್ ವೀಕ್ಷಣೆಗೆ ಸುಮಾರು 8 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ತುಮಕೂರು ಇನ್ ಚಾರ್ಜ್ ಸುನಿಲ್ ಪಟೇಲ್ ಹೇಳಿದರು.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸಹ ವಿವಿಧ ಬಗೆಯ ಆಟಗಳನ್ನು ಆಡಲು ವ್ಯವಸ್ಥೆ ಮಾಡಿದ್ದು,ತಿಂಡಿ-ತಿನಿಸುಗಳನ್ನು ತಿನ್ನಲು ಸ್ಟಾಲ್ ಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನ,ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜನರನ್ನು ನಿಯಂತ್ರಿಸಲು ಸುಮಾರು 25 ಜನ ಸೆಕ್ಯುರಿಟಿಗಳನ್ನು ನೇಮಕ ಮಾಡಲಾಗಿದೆ. ಈ ಎಲ್ಲ ಖರ್ಚು ವೆಚ್ಚಗಳನ್ನು ಬಿಸಿಸಿಐ ನೀಡುತ್ತಿದೆ. ಇದು ತುಮಕೂರಿನಲ್ಲಿ 4ನೇ ಬಾರಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.


ಬಿಸಿಸಿಐ ಪ್ರತಿನಿಧಿ ಅಮಿತ್ ಸಿದ್ದೇಶ್ವರ್ ರವರು ಮಾತನಾಡಿ, ಈ ಕ್ರಿಕೆಟ್ ನ್ನು ಬಿಸಿಸಿಐ ಮತ್ತು ಕೆ.ಸಿ.ಎಸ್.ಎ. ಸ್ಟೇಡಿಯಂನಲ್ಲಿ ನೋಡುವಂತೆ ನೋಡಬಹುದು ಜೊತೆಗೆ ಸ್ನೇಹಿತರು,ಬಂಧುಗಳು,ಕುಟುಂಬ ಸದಸ್ಯರ ಜೊತೆ ಕೂತು ಪಂದ್ಯಗಳನ್ನು ವೀಕ್ಷಣೆ ಮಾಡಿ ಖುಷಿ ಪಡಬಹುದು ಎಂದು ತಿಳಿಸಿದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?