ತುಮಕೂರು: ಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದ ಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕಸಾಪ ಹಾಗೂ ಶ್ವೇತಾಂಬರ ಮತ್ತು ದಿಗಂಬರ್ ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಬೋಗ,ಲಾಲಸ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿದಂತೆ ಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವುಗಳು ಕೂಡ ಅವರು ಹಾಕಿಕೊಟ್ಟದಾರಿಯಲ್ಲಿ ನಡೆದರೆ ಜಯಂತಿಗೂ ಒಂದು ಅರ್ಥ ಬರುತ್ತದೆ ಎಂದರು.

ಜೈನ ಮುನಿ ಶ್ರೀಶ್ರೀಭಾನುರತ್ನ ವಿಜಯಜೀ ಮಾತನಾಡಿದರು,ಕಾರ್ಯಕ್ರಮದಲ್ಲಿ ಜೈನ ಮುನಿ ಶ್ರೀಹರ್ಷ ರತ್ನ ವಿಜಯಜೀ, ಸುರೇಶಕುಮಾರ್, ಬಾಹುಬಲಿ ಬಾಬು,ಕಾರ್ಯದರ್ಶಿ. ಎಂ.ನಾಗರಾಜು, ಸುಬೋದ್‌ಕುಮಾರ್‌ಜೈನ್, ಉತ್ತಮಜೈನ್,ಸುರೇಂದ್ರಷಾ, ಶುಬೋದ್‌ಕುಮಾರ್, ವಿನಯಜೈನ್,ಎಸ್.ಎಂ.ಅಜಿತ್‌ಕುಮಾರ್, ತೀರ್ಥಕುಮಾರ್, ಡಾ.ಲಕ್ಷ್ಮಣ್ ದಾಸ್, ಸೇರಿದಂತೆ ಹಲವರು ಭಾಗವಹಿಸಿದ್ದರು.
- ಕೆ.ಬಿ.ಚಂದ್ರಚೂಡ