ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ದಿನ ಸಾರ್ವಜನಿಕರಿಂದ 2೦೦ ಇ-ಸ್ವತ್ತು ಅರ್ಜಿಗಳನ್ನು ಪಾಲಿಕೆಯ ಕೌಂಟರ್ ನಲ್ಲಿ ಸ್ವೀಕೃತವಾಗುತ್ತಿವೆ ಎಂದು ಪಾಲಿಕೆ ಆಯುಕ್ತೆ ಬಿ.ವಿ.ಆಶ್ವಿಜರವರು ತಿಳಿಸಿದರು.
ಇಂದು ಪಾಲಿಕೆಯ ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ಟೋಬರ್ 1ರಿಂದ ಈ ವರೆವಿಗೂ 7106 ಇಸ್ವತ್ತುಗಳನ್ನು ನೀಡಿದ್ದೇವೆ,ಇಲ್ಲಿವರೆವಿಗೂ 20507 ಇಸ್ವತ್ತುಗಳನ್ನು ನೀಡಿದ್ದೇವೆ. ಪಾಲಿಕೆಯಲ್ಲಿ ಒಟ್ಟು ಆಸ್ತಿಗಳ ಸಂಖ್ಯೆ 115000 ಇದ್ದು ಇನ್ನು ಮೂರು ತಿಂಗಳಲ್ಲಿ ಶೂನ್ಯಕ್ಕೆ ತರಲಿದ್ದೇವೆ ಈ ನಿಟ್ಟಿನಲ್ಲಿ ಪಾಲಿಕೆಯ ಸಿಬ್ಬಂದಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ರಜಾ ದಿನಗಳಲ್ಲಿಯೂ ಸಹ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಲ್ ಕಲೆಕ್ಟರ್ ಗಳನ್ನು ಕಂದಾಯ ನಿರೀಕ್ಷಕರನ್ನಾಗಿ ಮಾಡಲಾಗಿದೆ. ರೆವಿನ್ಯೂ ಡಿಸಿ,ಆಯುಕ್ತರು ಸೇರಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ,ಇಸಿ,ಎಂ.ಆರ್.೧೯ ಎಲ್ಲವನ್ನೂ ಪಾಲಿಕೆಯೇ ನೀಡುತ್ತಿದೆ,ಇದರಿಂದ ಸಾರ್ವಜನಿಕರಿಗೆ ಕೆಲಸ ಆಗುತ್ತಿದೆ,ತುರ್ತಾಗಿ ಬೇಕಾದ ಉದಾಹರಣೆಗೆ ಮದುವೆ,ಆರೋಗ್ಯದ ವಿಷಯ ಇದ್ದರೆ ಬ್ಯಾಂಕ್ ನಿಂದ ಸಾಲ ಬೇಕಾಗಿರುತ್ತದೆ ಅಂತಹವರಿಗೆ ತಕ್ಷಣವೇ ಇಸ್ವತ್ತು ನೀಡಿ ಅವರಿಗೆ ಮಾನವೀಯತೆಯ ಮೇರೆಗೆ ನೆರವಾಗುತ್ತಿದ್ದೇವೆ.

ನಗರದಲ್ಲಿ ಗುಂಡಿ ಮುಚ್ಚುವ ಕಾಮಗಾರಿ 2 ಪ್ಯಾಕೇಜ್ ಗಳಲ್ಲಿ 67 ಲಕ್ಷದ ವೆಚ್ಚದಲ್ಲಿ ನಡೆಸಲಾಗುತ್ತಿದೆ,ಅಜ್ಜಗೊಂಡನಹಳ್ಳಿಯಲ್ಲಿ ಕಸದ ವಿಲೇವಾರಿ ವೈಜ್ಞಾನಿಕವಾಗಿ ನಡೆಸಲು ನೂತನ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ,ನಗರದ 6 ಕೆರೆಗಳ ಸ್ವಚ್ಛತೆಗಾಗಿ ಎನ್.ಜಿ.ಓ,ದವರು ಮುಂದೆ ಬಂದಿದ್ದಾರೆ ಅದೊಂದು ಸ್ವಾಗತಾರ್ಹ ಬೆಳವಣಿಗೆ,ಅಂಗನವಾಡಿ,ನಮ್ಮ ಕ್ಲಿನಿಕ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ,ಕಸದ ವಿಲೇವಾರಿಗಾಗಿ ಗಮನ ಹರಿಸಲಾಗುತ್ತಿದೆ,ಸಿರಾಗೇಟ್ ರಸ್ತೆಗೆ ಡಾಂಬರು ಹಾಕುವ ಕಾಮಗಾರಿಗೆ ಶೀಘ್ರದಲ್ಲಿ ಅನುಮೋದನೆ ದೊರೆಯಲಿದೆ, 2025-26 ಆಯವ್ಯಯ ಬರುತ್ತಿದ್ದು ಸಾರ್ವಜನಿಕರು 8747948361 ಗೆ ವಾಟ್ಸ್ ಅಪ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಪಾಲಕ ಅಭಿಯಂತರಾದ ಕೆ.ಎಸ್.ಸಂದೀಪ್,ಡಿಸಿ ರೆವಿನ್ಯೂ ರುದ್ರಮುನಿ, ಪರಿಸರ ಅಭಿಯಂತರಾದ ಶ್ರೀಮತಿ ನಿಖಿತಾ, ವೀರೇಶ್ ಕಲ್ಮಠ,ಕೆ.ಎಸ್.,ಶಿವರಾಜು ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ್