ತುಮಕೂರು-ಸಾರ್ವಜನಿಕ ಸೇವೆಯೊಂದಿಗೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್ 50 ನೇ ಹುಟ್ಟುಹಬ್ಬ ಆಚರಣೆ-ಅಭಿಮಾನಿಗಳಿಂದ ಸೈನಿಕರಿಗೆ ದೇಣಿಗೆ,ವಿವಿಧ ಸವಲತ್ತು ವಿತರಣೆ

ತುಮಕೂರು: ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ಅವರ 50ನೇ ಹುಟ್ಟುಹಬ್ಬವನ್ನು ಶಾಸಕರ ಅಭಿಮಾನಿ ಬಳಗ ಗುರುವಾರ ಶಾಸಕರ ಕಚೇರಿ ಆವರಣದಲ್ಲಿ ಏರ್ಪಡಿಸಿತ್ತು. ಸಾವಿರಾರು ಸಾರ್ವಜನಿಕರು ಶಾಸಕರಿಗೆ ಶುಭಾಶಯ ಕೋರಿದರು.

ಹುಟ್ಟುಹಬ್ಬ ಆಚರಣೆಗಾಗಿವೇದಿಕೆ ಇಲ್ಲ, ಅನಗತ್ಯ ಭಾಷಣಗಳಿಲ್ಲ, ಕೇಕ್ ಕತ್ತರಿಸಿ ಹಂಚಲಿಲ್ಲ, ಹಾರ, ತುರಾಯಿ, ಮೈಸೂರು ಪೇಟತೊಡಿಸಲಿಲ್ಲ, ಪಟಾಕಿ ಸಿಡಿಸಿ ಸಂಭ್ರಮಿಸಲಿಲ್ಲ. ಆಡಂಬರದ ಆಚರಣೆಯ ಬದಲು ಸಮಾಜಮುಖಿ ಸೇವೆಗೆ ಹುಟ್ಟುಹಬ್ಬದ ಆಚರಣೆ ಸೀಮಿತವಾಗಿತ್ತು.

ಶಾಸಕರ ಅಭಿಮಾನಿ ಬಳಗದವರು ಮೊದಲಿಗೆ ಸೈನಿಕರ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ.ಗಳ ದೇಣಿಗೆಯ ಚೆಕ್ ನೀಡುವ ಮೂಲಕ ಶಾಸಕರ ಜನ್ಮದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಶ್ರಮಿಕರಿಗೆ, ಕಾರ್ಮಿಕರಿಗೆ ವಿವಿಧ ಸವಲತ್ತುಗಳ ಸೇವಾಗೌರವ ಸಮರ್ಪಿಸಿದರು.


ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆರಾಜ್ಯ ಸಚಿವ ವಿ.ಸೋಮಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕರಿಗೆ ಜನ್ಮದಿನದ ಶುಭಾಶಯ ಕೋರಿದರು.ಸರಳ, ಸಜ್ಜನಿಕೆ, ಎಲ್ಲರೊಂದಿಗೆ ಬೆರೆಯುವ ಗುಣ ಸ್ವಭಾವದ ಶಾಸಕ ಜ್ಯೋತಿಗಣೇಶ್‌ಅವರು ಮತ್ತಷ್ಟು ಜನಪರ ಕೆಲಸ ಮಾಡಿ ನಗರದಜನರಿಗೆ ನೆರವಾಗಲಿ ಎಂದು ಆಶಿಸಿದರು.


ಕಾರ್ಮಿಕರು ಈ ದೇಶದ ಅಭಿವೃದ್ಧಿಯ ಶಕ್ತಿ, ವಿಶೇಷವಾಗಿ ಪೌರಕಾರ್ಮಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು.ಮೋದಿಯವರು ಪೌರಕಾರ್ಮಿಕರ ಪಾದಪೂಜೆ ಮಾಡಿ ಅವರ ಸೇವೆಯನ್ನು ಗೌರವಿಸಿದ್ದಾರೆ ಎಂದು ಹೇಳಿದರು.

ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಆರೋಗ್ಯ ತಪಾಸಣಾ ಶಿಬಿರ, ಕೃತಕ ಕೈ, ಕಾಲು ಜೋಡಣಾ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣೆ, ಬೀದಿಬದಿ ವ್ಯಾಪಾರಿಗಳಿಗೆ ನೆರಳಾಗಲು ಕೊಡೆ ವಿತರಣೆ, ಆಟೋಚಾಲಕರಿಗೆ ಸಮವಸ್ತç, ದಿನಪತ್ರಿಕೆ ವಿತರಕರಿಗೆ ಜರ್ಕಿನ್ ವಿತರಣೆ, ಗೋಶಾಲೆಗಳಿಗೆ ಮೇವು ವಿತರಿಸಲಾಯಿತು.ಪೌರಕಾರ್ಮಿಕರಿಗೆ ಗೃಹಬಳಕೆ ವಸ್ತುಗಳ ಹಂಚಿಕೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.

ಇದಲ್ಲದೆ, ಹಿರಿಯ ನಾಗರೀಕರಿಗೆ ಆಯುಷ್ಮಾನ್‌ಕಾರ್ಡ್, ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕಾರ್ಡ್, ವಾಹನ ಚಾಲಕರಿಗೆ ವಿಮಾ ಯೋಜನೆಯ ಕಾರ್ಡ್ ವಿತರಿಸಲಾಯಿತು. ಅಭಿಮಾನಿಗಳು ನಗರದ ವಿವಿಧ ಬಡಾವಣೆಗಳಲ್ಲಿ ಅಲ್ಲಿನ ದೇವಸ್ಥಾನಗಳಲ್ಲಿ ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ, ಗ್ರಂಥಾಲಯಗಳಿಗೆ ಪುಸ್ತಕ, ಪೀಠೋಪಕರಣ ವಿತರಣೆ ಸೇರಿದಂತೆ ವಿವಿಧ ಸೇವಾಕಾರ್ಯಕ್ರಮಗಳೊಂದಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಜನ್ಮದಿನವನ್ನು ಸ್ಮರಣೀಯವಾಗಿಸಿದರು.

ಈ ಸಂದರ್ಭದಲ್ಲಿ ಆಟೋಯೆಡೆಯೂರಪ್ಪ, ರವೀಶಯ್ಯ, ಸಿ.ಎನ್.ರಮೇಶ್, ಪುಟ್ಟರಾಜು, ವಿಷ್ಣುವರ್ಧನ್, ಜಗದೀಶ್,ಜಗದೀಶ್, ಸದಾಶಿವಯ್ಯ, ಶಂಭು,ಬೊಂಬುಮೋಹನ್,ಎಂ.ಗೋಪಿ ಇತರರು ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?