ತುಮಕೂರು-ಕಳಪೆ-ಗುಣಮಟ್ಟದ-ಔಷಧಿಗಳ-ಪೂರೈಕೆಯಿಂದ ಕರ್ನಾಟಕ-ವಿವಿಧ-ಜಿಲ್ಲಾಸ್ಪತ್ರಗಳಲ್ಲಿ-ಬಾಣಂತಿಯರ-ಸಾವುಗಳು ಸಂಭವಿಸುತ್ತಿವೆ- ಡ್ರಗ್-ಎಕ್ಷನ್-ಪೋರಂನ-ಸಂಸ್ಥಾಪಕ-ಸದಸ್ಯ -ಡಾ.ಗೋಪಾಲ-ದಾಬಡೆ

ತುಮಕೂರು: ಕಳಪೆ ಗುಣಮಟ್ಟದ ಔಷಧಿಗಳ ಪೂರೈಕೆಯಿಂದ ಕರ್ನಾಟಕ ವಿವಿಧ ಜಿಲ್ಲಾಸ್ಪತ್ರಗಳಲ್ಲಿ ಬಾಣಂತಿಯರ ಸಾವುಗಳು ಸಂಭವಿಸುತ್ತಿವೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಾಣಂತಿಯರ ಸಾವು ಪ್ರಕರಣಗಳು ಘಟಿಸುತ್ತಿರುವುದು ಕರ್ನಾಟಕದಲ್ಲಿ, ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಫೆ.3 ರಂದು ಬೀದರ್ ನಿಂದ ಶುರುವಾದ ‘ಆರೋಗ್ಯ ಹಕ್ಕಿನ ಜಾಥಾ’ ಫೆ.೧೪ ರಂದು ಬೆಂಗಳೂರು ತಲುಪಲಿದೆ ಎಂದು ಡ್ರಗ್ ಎಕ್ಷನ್ ಪೋರಂ ನ ಸಂಸ್ಥಾಪಕ ಸದಸ್ಯ ಡಾ.ಗೋಪಾಲ ದಾಬಡೆ ತಿಳಿಸಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ಟ್ರಗ್ ಎಕ್ಷನ್ ಪೋರಂ ಕರ್ನಾಟಕ ಹಾಗೂ ಸಾರ್ವತ್ರಿಕ ಆರೋಗ್ಯ ಕರ್ನಾಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತೆಗಲ್ಲಿ ೪೦೦ಕ್ಕೂ ಹೆಚ್ಚು ಕಳಪೆ ಔಷಧಗಳು ಬಳಕೆಯಾಗುತ್ತಿವೆ. ತಮಿಳುನಾಡು ರಾಜ್ಯದಲ್ಲಿ ಪ್ಯಾರಾಸಿಟಮಲ್ ಅನ್ನು ಕೇವಲ 25 ಪೈಸೆಗೆ ನೀಡುತ್ತಿದ್ದರೆ, ನಮ್ಮ ಕರ್ನಾಟಕದಲ್ಲಿ 2.5 ರೂಗೆ ಮಾರಾಟ ಮಾಡುತ್ತಿರುವುದು ದುರ್ದೈವ ಎಂದು ಹೇಳಿದರು.

ರಾಜಾಸ್ಥಾನದಲ್ಲಿರುವ `ಆರೋಗ್ಯ ಹಕ್ಕು ಮಸೂದೆ’ಯು ರಾಜ್ಯದ ಜನರಿಗೆ ಸರಿಯಾದ ಆರೋಗ್ಯದ ಹಕ್ಕನ್ನು ಒದಗಿಸುತ್ತದೆ. ನಿವಾಸಿಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಈ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಎಸ್‌ಎಎ-ಕೆ ಅಧ್ಯಯನವೊಂದರ ಪ್ರಕಾರ (ಜುಲೈ ೨೦೨೩) 598 ಜನರು ಔಷಧಿಗಾಗಿ ಸುಮಾರು 2.28 ಲಕ್ಷ ಖರ್ಚು ಮಾಡಿದ್ದಾರೆ. ದುಬಾರಿ ಆರೋಗ್ಯ ವೆಚ್ಚದಿಂದ ದೇಶದಲ್ಲಿ ಪ್ರತೀ ವರ್ಷ 40 ಲಕ್ಷ ಜನರು ಬಿಪಿಎಲ್ ನತ್ತ ಸಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ ಎಂದು ತಿಳಿಸಿದರು. ಔಷಧಿಗಳು ಜನರಿಗೆ ಸರಿಯಾಗಿ ಲಭ್ಯವಾಗಬೇಕು. ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಕೆ ಮಾಡಲಾಗುತ್ತಿದ್ದರೂ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಸರಬರಾಜು ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳದೆ ಔಷಧಿಗಳನ್ನು ಖರೀದಿಸುವ ಮೂಲಕ ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ಪ.ಬಂಗಾಳ ಮೂಲದ ಸರಬರಾಜು ಕಂಪನಿ ಹಲವಾರು ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಔಷಧಿ ಪೂರೈಸಿರುವುದು ತಿಳಿದು ಬಂದಿದೆ.

ಇದು ಗೊತ್ತಿದ್ದರೂ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಮುನ್ನ ನೋಟೀಸ್ ನೀಡಬೇಕಿತ್ತು. ಇದನ್ನು ಅನುಸರಿಸದಿರವ ಕಾರಣ ತಡೆಯಾಜ್ಞೆ ಕೋರಿ ಕಂಪನಿಯು ಹೈಕೋರ್ಟ್ ಮೊರೆ ಹೋಗಿದೆ. ಈಗ ಮತ್ತೆ ಕೊಲೆಗಾರ ಸಲೈನ್ ಉತ್ಪನ್ನಗಳನ್ನು ಮಾರಾಟಮಾಡುವುದನ್ನು ಮುಂದುವರೆಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನರಿಕ್ ಮಡೆಸಿನ್ ಖಾಸಗೀ ಆಸ್ಪತ್ರೆಗಳಲ್ಲಿರಲಿ, ಇದರ ಹೊರತಾಗಿ ಸರ್ಕಾರಿ ಆಸ್ಪತ್ರೆಗಳ ಎದುರು ಬೇಡ. ತಮಿಳುನಾಡಿನಲ್ಲಿ ಕರ್ನಾಟಕದ ರೀತಿ ಜನರ ಆರೋಗ್ಯದಲ್ಲಿ ಕಮಿಷನ್ ದಂಧೆ ರಾಜಿ ಮಾಡಿಕೊಂಡಿಲ್ಲ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳ ಮುಂದೆ ಯಾವುದೇ ಖಾಸಗೀ ಫಾರ್ಮಸಿಗಳಾಗಲೀ ಅಥವಾ ಎಕ್ಸ್ರೇ, ಸಿಟಿ ಸ್ಕಾನಿಂಗ್, ಕ್ಲಿನಿಕ್‌ಗೆ ಅವಕಾಶ ನೀಡಲಾಗಿಲ್ಲ. ಆದರೆ ಕರ್ನಾಟಕದಲ್ಲಿ ಇವೆಲ್ಲವೂ ಕಣ್ಣೆದುರಿಗಿರುವ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕರ್ನಾಟಕ ಸರ್ಕಾರದಿಂದ ನೋಂದಾಯಿಸಲ್ಪಟ್ಟ ಕೆಎಸ್‌ಎಂಎಸ್‌ಸಿಎಲ್ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಯಾವುದೇ ವ್ಯಕ್ತಿಗೆ ವೈದ್ಯಕೀಯ ಸೌಲಭ್ಯ ಉಚಿತವಾಗಿ ನೀಡುವುದು ಸರ್ಕಾರದ ಜವಾಬ್ದಾರಿ. ಕೆಎಸ್‌ಎಂಎಸ್‌ಸಿಎಲ್ ಜನ ಪರವಾಗಿರಬೇಕು, ಪಾರದರ್ಶಕವಾಗಿರಬೇಕು. ಬೇರೆಡೆಗೆ ಔಷಧಿ ಬರೆಯಬಾರದು. ತಮಿಳುನಾಡು, ರಾಜಾಸ್ಥಾನ ಹಾಗೂ ಕೇರಳವನ್ನು ನೋಡಿ ಕರ್ನಾಟಕ ಕಲಿಯಬೇಕು ಎಂದು ಸಲಹೆ ನೀಡಿದರು. ಹಿಂದುಳಿದ ಹಾಗೂ ಬಡ ರಾಜ್ಯ ಎಂದು ಕರೆಸಿಕೊಳ್ಳುವ ರಾಜಾಸ್ಥಾನ ಆರೋಗ್ಯ ಹಕ್ಕು ಮಸೂದೆಯನ್ನು ಜಾರಿಗೊಳಿಸಿದೆ. ‌

ಪಶ್ಚಿಮ ಭಂಗಾ ಫಾರ್ಮಸ್ಯೂಟಿಕಲ್‌ನ ರಿಂಗ್ ಲ್ಯಾಕ್ಟೇಟ್ ಐ.ವಿ.ದ್ರಾವಣ ದಿಂದಾಗಿ ಬಾಣಂತಿಯರಲ್ಲಿ ಸೋಂಕು ಕಾಣಿಸಿಕೊಂಡು ಅದರಿಂದಾಗಿ ಬಹು ಅಂಗಾಗ ವೈಫಲ್ಯ ಸಂಭವಿಸಿದೆ ಎಂದು ವೈದ್ಯಕೀಯ ತಜ್ಞರು ಅಂದಾಜು ಮಾಡಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಈ ರೀತಿಯ ಪ್ರಕರಣಗಳು ನಡೆದಿವೆ.

ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆ ಖರೀದಿ ಮಾಡಿದ ಮೇಲೆ ಈ ಔಷಧಿಯ ಗುಣಮಟ್ಟವನ್ನು ಪರೀಕ್ಷೆ ಮಾಡಿ ನಂತರ ಬಿಡುಗಡೆ ಮಾಡಬೇಕು. ಇದನ್ನು ತಮಿಳುನಾಡು ಸರ್ಕಾರ ಗಂಭೀರವಾಗಿ ಮಾಡುತ್ತಿದೆ. ಇದು ಮೂಲ ದೋಷವಾಗಿದ್ದು, ಬಾಣಂತಿಯರ ಸಾವಿಗೆ ಇದುವೇ ಮೂಲ ಕಾರಣ. ಈ ಕುರಿತಾಗಿ ಗಂಭೀರವಾಗಿ ಪರಿಗಣಿಸಿ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


ಈ ವೇಳೆ ಪರಿಸರವಾದಿ ಸಿ.ಯತಿರಾಜು, ಮೆಡಿಕಲ್ ಅಸೋಸಿಯೇಶನ್‌ನ ಪಂಡಿತ್ ಜವಾಹರ್, ಡಾ. ಅಡಿಗ ಸುಬ್ರಹ್ಮಣ್ಯ, ಪ್ರೊ.ಅಕ್ಕಮ್ಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?