ತುಮಕೂರು-ಪ್ರಧಾನಿ-ನರೇಂದ್ರ-ಮೋದಿ-ಅವರಿಂದ-ಪಿ.ಎಂ. ಕಿಸಾನ್-ಯೋಜನೆಯ-19 ನೇ-ಕಂತಿನ-ಹಣ-ಬಿಡುಗಡೆ


ತುಮಕೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 19 ನೇ ಕಂತನ್ನು ಬಿಹಾರದ ಭಗಲ್‌ಪುರದಲ್ಲಿ ಸೋಮವಾರ ಬಿಡುಗಡೆ ಮಾಡಿದರು.


ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ವೀಕ್ಷಣೆ ಮಾಡಿದ ನಂತರ ಜಿಲ್ಲೆಯ ತಿಪಟೂರಿನ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಮಾತನಾಡುತ್ತಾ, ದೇಶದ 9.80 ಕೋಟಿ ರೈತರಿಗೆ ( 2.41ಕೋಟಿ ಮಹಿಳಾ ರೈತರು ಸೇರಿದಂತೆ) ಒಟ್ಟು 22,೦೦೦ ಕೋಟಿ ರೂ.ಗಳನ್ನು ಈ ಕಂತಿನ ಹಣವಾಗಿ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಬಿಡುಗಡೆಗೊಳಿಸಲಾಗಿದೆ.

ಇದರಲ್ಲಿ ರಾಜ್ಯದ 44.2 ಲಕ್ಷ ಫಲಾನುಭವಿಗಳಿಗೆ 884 ಕೋಟಿ ರೂ. ಒಳಗೊಂಡಿದೆ. ಈ ಯೋಜನೆ ಕೇವಲ ರೈತರನ್ನಷ್ಟೇ ಪ್ರೋತ್ಸಾಹಿಸದೆ ದೇಶದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಮೃದ್ಧಿಗಾಗಿ ನಾಂದಿ ಹಾಕಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ತಿಪಟೂರು ಪುರಸಭೆ ಅಧ್ಯಕ್ಷೆ ಯುಮುನಾ ಧರಣೇಶ್, ತಿಪಟೂರು ತಾಲ್ಲೂಕು ತಹಶೀಲ್ದಾರ್ ಪವನ್ ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?