ತುಮಕೂರು- ಇತ್ತೀಚಿನ ಕಾಲದಲ್ಲಿ ಮಕ್ಕಳಲ್ಲಿ ಫೋನ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ. ಆ ಮೂಲಕ ಅವರ ಭವಿಷ್ಯಕ್ಕೆ ತೊಡಕಾಗುತ್ತಿದೆ. ಹಾಗಾಗಿ ಪೋಷಕರು ಮಕ್ಕಳು ಫೋನ್ ಬಳಸದಂತೆ ನೋಡಿಕೊಳ್ಳಬೇಕಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ತಿಳಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸಿರಾ ಗೇಟ್‌ನಲ್ಲಿರುವ ಅರಿವು ಇಂಟರ್ ನ್ಯಾಷನಲ್ ಶಾಲೆಯ 2024-25ನೇ ಸಾಲಿನ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಫೇಸ್ ಬುಕ್, ಇನ್ಸ್ಟ್ರಾಗ್ರಾಮ್ ಬಳಸದೆಯೂ ಬದುಕಬಹುದು. ಮಕ್ಕಳಲ್ಲಿ ಫೇಸ್ ಬುಕ್ ಇನ್ಸ್ಟ್ರಾಗ್ರಾಮ್ ಕಡಿಮೆ ಬಳಸುವಂತೆ ಪೋಷಕರು ನೋಡಿಕೊಂಡರೆ ಮಕ್ಕಳ ಭವಿಷ್ಯಕ್ಕೆ ಚೆನ್ನಾಗಿರುತ್ತದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದ ಅವರು, ಮಕ್ಕಳ ಆಸಕ್ತಿಯನ್ನು ತಿಳಿದುಕೊಂಡು ಅವರಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು ಕೂಡ ಮಕ್ಕಳ ಮೇಲೆ ಇದೇ ಓದಬೇಕು, ಅದನ್ನೇ ಓದಬೇಕು ಎಂದು ಒತ್ತಡವನ್ನು ಹಾಕಬಾರದು ಎಂದು ಸಲಹೆ ಮಾಡಿದರು.

ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಮಕ್ಕಳಿಗೆ ಪೋಷಕರು ಒತ್ತಡ ಹಾಕಬಾರದು. ಅವರು ಬೆಳೆದಂತೆ ಅವರ ಆಸಕ್ತಿಗೆ ತಕ್ಕಂತೆ ಓದಲು ಬಿಡಬೇಕು. ಮಕ್ಕಳಿಗೆ ಪೋಷಕರು ಚಿಕ್ಕಂದಿನಿಂದಲೇ ಒತ್ತಡ ಹೇರುವ ಮೂಲಕ ಮಕ್ಕಳು ತಮ್ಮಲ್ಲಿನ ಆಸಕ್ತಿಯನ್ನು ಕುಂಠಿತಗೊಳಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಆಸಕ್ತಿಯನ್ನು ಅರಿತು ಅವರಿಗೆ ಸಹಕಾರ ನೀಡಬೇಕು. ನಮ್ಮ ದೇಶ, ನಮ್ಮ ನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆಂಜಿನಪ್ಪ ಟಿ.ಎಂ., ವಲಯ ವ್ಯವಸ್ಥಾಪಕ ನಿತಿನ್ ಕೆ , ಶಿವಕುಮಾರ್ ಎಸ್ಪಿ ರಾಜಸಿರಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್, ತುಮಕೂರು, ಮಹಾನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಿ ನರಸಿಂಹರಾಜು, ಅರಿವು ಅಂತರರಾಷ್ಟ್ರೀಯ ಶಾಲೆಯ ವಕೀಲರು ಮತ್ತು ಅಧ್ಯಕ್ಷರಾದ ವಿ ಜಗದೀಶ್ ಕುಮಾರ್, ಶಿಕ್ಷಕರು, ಬೋಧಕೇತರ ಸಿಬ್ಬಂದಿ ವರ್ಗ, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.