ತುಮಕೂರು: ಬಳ್ಳಾರಿ ಜಿಲ್ಲೆ ಮೀನಹಳ್ಳಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಫೆಬ್ರವರಿ 3 ರಿಂದ 14 ರವರೆಗೆ ಏರ್ಪಡಿಸಿದ್ದ ಪುನರ್ಮನನ ತರಬೇತಿಯಲ್ಲಿ ಜಿಲ್ಲೆಯ ಗುಬ್ಬಿ ತಾಲ್ಲೂಕು ಘಟಕಾಧಿಕಾರಿ(ಪ್ರಭಾರ) ಮಲ್ಲಿಕಾರ್ಜುನಯ್ಯ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನಯ್ಯ ಅವರಿಗೆ ಚಿನ್ನದ ಪದಕ ಲಭಿಸಿರುವುದು ಇತರೆ ಗೃಹರಕ್ಷಕರಿಗೆ ಪ್ರೇರಣೆಯಾಗಿದ್ದು, ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಗೃಹರಕ್ಷಕ ದಳ ಘಟಕ ಕಚೇರಿಯ ಅಧಿಕಾರಿ/ಸಿಬ್ಬಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪದಕ ಗಳಿಸಿದ ಮಲ್ಲಿಕಾರ್ಜುನಯ್ಯ ಅವರನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ, ಉಪ ಸಮಾದೇಷ್ಟ ಆರ್. ರಾಜೇಂದ್ರನ್, ಬೋಧಕರಾದ ಶಿವಪ್ರಸಾದ್, ಸಹಾಯಕ ಬೋಧಕ ಶ್ರೀನಿವಾಸ್, ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.