ತುಮಕೂರು :- ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಯುವಕರಿಗೆ ಕುಟುಂಬಸ್ಥರೊಂದಿಗೆ ಬೆರೆಯುವುದರಿಂದ ಮನೋವಿಕಾಸ ಗೊಳ್ಳುತ್ತದೆ ಕೆಟ್ಟಆಲೋಚನೆಗಳನ್ನು ದೂರ ಮಾಡುತ್ತದೆ ಎಂದಿದ್ದಾರೆ.
ನಗರದ ಸರಸ್ವತಿಪುರಂ ನಲ್ಲಿ ಇರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಹಾಗೂ ಐ.ಕ್ಯೂ.ಎ.ಸಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯ ಕ್ರಮದಲ್ಲಿ. ಸರಿಗಮಪ ಸೀಸನ್ 21ರ ನಾಗಮಣಿ ನಾಗಭೂಷಣ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು ನಂತರ ಕಾರ್ಯಕ್ರಮವನ್ನು ಕುರಿತು ಶ್ರೀಮತಿ ನಾಗಮಣಿ ಗಾಯನದ ಮೂಲಕ ಎಲ್ಲರನ್ನೂ ರಂಜಿಸುತ್ತಾ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ನಗುವ ಮತ್ತು ನಗಿಸುವ ಮನಸ್ಸು ನಮ್ಮಲ್ಲಿದ್ದರೆ ಯಾವುದೇ ಕಾಯಿಲೆಗಳನ್ನು ಎದುರಿಸಬಹುದು ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ಇದ್ದೇ ಇರುತ್ತದೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ.
ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ ಎಂಬುದು ಎಷ್ಟು ನಿಜವೋ ಅಷ್ಟೇ ಒಬ್ಬ ಮಹಿಳೆಯ ಯಶಸ್ಸಿನ ಹಿಂದೆ ಪುರುಷನ ಮಹತ್ವವು ಹೆಚ್ಚಾಗಿರುತ್ತದೆ ನನ್ನ ಜೀವನದಲ್ಲಿ ನನ್ನ ತಂದೆ ಮತ್ತು ನನ್ನ ಪತಿಯ ಪ್ರೋತ್ಸಾಹ ನನ್ನನ್ನು ಇಲ್ಲಿಯವರೆಗೆ ಬರಲು ಸಾಧ್ಯ ಮಾಡಿಕೊಟ್ಟಿದೆ, ಪ್ರತಿಯೊಬ್ಬರಲ್ಲೂ ನಾವು ಏನಾದರೂ ಸಾಧಿಸಬೇಕೆಂಬ ಹಟಚಲ ಇದ್ದರೆ ನಾವು ಆದಷ್ಟು ಬೇಗ ಯಶಸ್ಸಿನಿಂದ ಹೋಗಬಹುದು . ಕುಟುಂಬದೊಂದಿಗೆ ಬೆರೆತಾಗ ಮಾತ್ರ ಯುವಕರಲ್ಲಿ ಮಹಿಳೆಯರ ಮೇಲೆ ಗೌರವ ಹೆಚ್ಚಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ತಿಳಿಸಿದರು, ಜೊತೆಗೆ ಹಾಡನ್ನು ಹಾಡುತ್ತಾ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತ ಮಾತನಾಡಿ ಮಹಿಳಾ ದಿನಾಚರಣೆಯನ್ನು ಮಾಡುವಂಥದ್ದು ಪ್ರತಿಯೊಬ್ಬ ಮಹಿಳೆಯರಿಗೂ ಸಹ ಗೌರವ ನೀಡಿದಂತೆ ಮಹಿಳೆಯರ ಸಾಧನೆ . ಅವರು ಅನುಭವಿಸುತ್ತಿರುವಂತಹ ಸಂಕಷ್ಟಗಳನ್ನ ಚರ್ಚಿಸುವ ವೇದಿಕೆ ಯಾಗಬೇಕು ಮತ್ತು ಸಾಧನೆಯನ್ನ ಶ್ಲಾಗಿಸುವ ವೇದಿಕೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಘಟಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಮಣ್ಣೆ, ಐ.ಕ್ಯೂ.ಎ.ಸಿ ಸಂಚಾಲಕರಾದ ಸೈಯದ್‌ಬಾಬು, ಮಹಿಳಾ ಸಬಲೀಕರಣದ ಸಂಚಾಲಕರು ಹಾಗೂ ಕನ್ನಡ ವಿಭಾಗದ ಉಪನ್ಯಾಸಕರಾದ ಆಶಾ ಎಚ್ ಎಲ್, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.