ತುಮಕೂರು: ಎಸ್.ಎಸ್.ಎಲ್.ಸಿ.ಅನ್ನುವುದು ಪ್ರತಿ ವಿದ್ಯಾರ್ಥಿಗಳ ಜೀವನದಲ್ಲಿ ಬಹು ದೊಡ್ಡ ತಿರುವು ನೀಡುತ್ತದೆ,ವಿದ್ಯಾರ್ಥಿಗಳು ಶಿಕ್ಷಕರು ಅಂದು ಹೇಳಿಕೊಟ್ಟ ಪಾಠಗಳನ್ನು ಅಂದೇ ಓದಬೇಕು, ಪ್ರತಿ ನಿತ್ಯ ಪ್ರಾತಃಕಾಲ ಎದ್ದು ವ್ಯಾಯಾಮಗಳನ್ನು ಮಾಡಿ ದೇವರ ಸ್ಮರಣೆ ಮಾಡಿ ಕಷ್ಟ ಪಟ್ಟು ಓದಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ತುಮಕೂರು ಗ್ರಾಮಾಂತರ ಯೋಜನಾಧಿಕಾರಿ ಪಿ.ಬಿ.ಸಂದೇಶ್ ರವರು ತಿಳಿಸಿದರು.
ಅವರು ಇಂದು ನಗರದ ವಿನೋಬನಗರದಲ್ಲಿರುವ ಶ್ರೀ ಸಿದ್ಧಾರ್ಥ ಸನಿವಾಸ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯಿAದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ನಡೆದ 3 ತಿಂಗಳ ಟ್ಯೂಶನ್ ತರಗತಿಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ವಕೀಲರೂ ಪತ್ರಕರ್ತರಾದ ಕೆ.ಬಿ.ಚಂದ್ರಚೂಡರವರು ದುಶ್ಚಟ ದುರಾಭ್ಯಾಸಗಳಿಂದ ವಿದ್ಯಾರ್ಥಿಗಳು ದೂರವಿರಬೇಕು, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು, ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್.ಐಪಿಎಸ್, ಕೆಎ.ಎಸ್.ಬ್ಯಾಂಕಿಂಗ್,ನ್ಯಾಯಾಧೀಶರು, ಚಾರ್ಟೆರ್ಡ್ ಅಕೌಂಟೆಂಟ್ ಹೀಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಾಧಿಸಬೇಕು,ಗುರುಗಳಿಗೆ,ತಂದೆ-ತಾಯಿಗಳಿಗೆ ಗೌರವ ನೀಡಬೇಕು, ಸಚ್ಛಾರಿತ್ರ ಮುಖ್ಯ,ಎಲ್ಲರ ಬಳಿ ಪ್ರೀತಿ ವಿಶ್ವಾಸ,ನಂಬಿಕೆ ಗಳಿಸಬೇಕು,ಶಿಕ್ಷಕರ ಮಾರ್ಗದರ್ಶನದಲ್ಲಿ ನಿಮ್ಮ ಜೀವನ ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಚಂದ್ರಶೇಖರನಾಯಕ್ ರವರು ವಿದ್ಯಾರ್ಥಿಗಳು ಬಡತನವನ್ನೇ ದೊಡ್ಡ ಸಮಸ್ಯೆಯಾಗಿ ಬಳಸಿಕೊಳ್ಳಬಾರದು,ಬಡತನ ಹೋಗಬೇಕಾದರೆ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಶಿಕ್ಷಣವೊಂದೇ ಆಯುಧ,ಎಲ್ಲರೂ ಉನ್ನತ ವ್ಯಾಸಂಗ ಮಾಡಿ ನಮ್ಮ ಶಿಕ್ಷಣ ಸಂಸ್ಥೆಗೆ ಹೆಸರು ತನ್ನಿ ಎಂದು ಆಶಿಸಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಹೇಮಂತ್,ಸೇವಾ ಪ್ರತಿನಿಧಿಗಳಾದ ಶಶಿಕಲಾ,ಹಸೀನಾ,ಶೈಲಜಾ,ಶಿಕ್ಷಕರು ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ