ತುಮಕೂರು: ಸೋಶಿಯಲ್ ಡೆಮೊಗ್ರೇಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ತುಮಕೂರು ಶಾಖೆಯ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ನಗರದ ದಾನಃ ಪ್ಯಾಲೆಸ್ ಸರ್ಕಲ್‌ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಫಜಲುಲ್ಲಾ ಅವರು ಕಾರ್ಮಿಕರ ಹಕ್ಕುಗಳು ಹಾಗೂ ಅವರ ಕೊಡುಗೆಯ ಬಗ್ಗೆ ಮಾತನಾಡಿದರು.
ಅರಣ್ಯ ಇಲಾಖೆ ಮಾಜಿ ಅಧಿಕಾರಿಯಾದ ಕಲಿಮುಲ್ಲಾ ಶರೀಫ್ ಹಾಗೂ ಸಮಾಜಸೇವಕರಾದ ಮುಕ್ತಿಯಾರ್ ಅಹಮದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೂನಿಯನ್ ಕಾರ್ಯಚಟುವಟಿಕೆಗಳ ಕುರಿತು ವಿಶ್ಲೇಷಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಆಟೋದಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಪ್ರಾಮಾಣಿಕತೆಯಿಂದ ಹಿಂತಿರುಗಿಸಿದ್ದ ಆಟೋ ಚಾಲಕ ರವಿಕುಮಾರ್, ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪ್ರಥಮ ದರ್ಜೆ ಪಡೆದ ವಿದ್ಯಾರ್ಥಿನಿ ಫಾತಿಮಾ ಪರಹಾಜ್, ಅರಣ್ಯ ಇಲಾಖೆ ಮಾಜಿ ಅಧಿಕಾರಿಗಳಾದ ಅಲಿಮುಲ್ಲಾ ಶರೀಫ್, ಸಮಾಜಸೇವಕ ಮುಕ್ತಿಯಾರ್ ಅಹಮದ್ ಮತ್ತು ಹಿರಿಯ ಕಾರ್ಮಿಕ ಜಾಬೀರ್ ಖಾನ್ ರವರಿಗೆ ಎಸ್.ಡಿ.ಟಿ.ಯು ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮುಬಾರಕ್ ಪಾಷಾ, ಉಪಾಧ್ಯಕ್ಷ ಮೊಹಮ್ಮದ ಅಕ್ರಮ್, ಕಾರ್ಯದರ್ಶಿ ಜಬಿ ಉಲ್ಲಾ, ಖಜಾಂಚಿ ನಯಾಜ್ ಪಾಷಾ ಸೇರಿದಂತೆ ಅಮ್ಜದ್, ಆಸಿಫ್, ಝಬಿ, ಹಬೀಬ್, ಮಂಜ್ ಮತ್ತು ಹಲವು ಕಟ್ಟಡ ಕಾರ್ಮಿಕರು ಹಾಜರಿದ್ದರು.
–