ತುಮಕೂರು: ನಗರದ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಸಂಚುರ ವಾಚ್ ಕೇಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಕಾರ್ಮಿಕರು ನ್ಯಾಯಕ್ಕಾಗಿ ದಶಕದ ಹೆಚ್ಚು ಕಾಲ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಜಯದಕ್ಕಿದೆ.
ಈ ಸಂಬಂಧ ಕಾರ್ಖಾನೆಯನ್ನು ಅಕ್ರಮ ಬೀಗ ಮುದ್ರೆಗೆ ಒಳಪಡಿಸಿದ್ದ ಆಡಳಿತ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ಅವರಿಗೆ ಕಾರ್ಮಿಕರಿಗೆ ನ್ಯಾಯ ಬದ್ಧವಾಗಿ ಬರಬೇಕಾದಂತಹ ಹಣದ ಪರಿಹಾರವನ್ನು ನೀಡುವಂತೆ ಕೋರಿ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಕಾರ್ಮಿಕರು ಕಾರ್ಮಿಕ ನ್ಯಾಯಾಧೀಕರಣ ಕಾರ್ಮಿಕ ನ್ಯಾಯಾಧಿಕರಣದಲ್ಲಿ ವಕೀಲರಾದಂತಹ ಹಿರಿಯ ಕಾರ್ಮಿಕ ನಾಯಕರು ಆದಂತ ಮುರಳೀಧರ್ ರವರು ವಿವಾದವನ್ನು ಕಾರ್ಮಿಕರ ಪರವಾಗಿ ವಾದಿಸಿ, ಪರಿಹಾರದ ಮೊತ್ತವನ್ನು ನೀಡುವಂತೆ ನ್ಯಾಯಾಲಯದ ಆದೇಶವನ್ನು ಪಡೆಯಲು ಯಶಸ್ವಿಯಾಗಿದ್ದರು.
ಹಾಗೂ ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ ದಾವೇ ಹೂಡಿ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪ್ರಾಧಿಕಾರ ಕಾರ್ಮಿಕರು ಉಪಧಮಕ್ಕೆ ಅರ್ಹ ಎಂದು ತೀರ್ಪು ನೀಡಿತು.

ನ್ಯಾಯಾಲಯಗಳ ಆದೇಶದ ನಂತರವೂ ಆಡಳಿತ ಮಂಡಳಿಯು ಕಾರ್ಮಿಕ ದಿನಾಚರಣೆಯಾಗ ಬೇಕಾದಂತಹ ಹಾಗೂ ಪರಿಹಾರವನ್ನು ನೀಡದೆ ಇದ್ದ ಕಾರಣ ಕಾರ್ಮಿಕರು ಅಧಿಕಾರಿಗಳ ಮೂಲಕ ಭೂ ಕಂದಾಯ ಬಾಕಿ ವಸೂಲಾತಿ ಕ್ರಮಕ್ಕೆ ಮುಂದಾದರು.
ವರ್ಷಗಳು ಕಳೆದರೂ ಕ್ರಮ ಕೈಗೊಳ್ಳದ ಕಾರಣ ಬಳಲಿ ಬೆಂಡಾಗಿದಂತಹ ಕಾರ್ಮಿಕರು ಉಪಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪನವರು ತುಮಕೂರಿಗೆ ಬಂದಿದ್ದಾಗ ಮನವಿ ಸಲ್ಲಿಸಿದ್ದರು,ಉಪಲೋಕಾಯುಕ್ತ ಆದೇಶದಿಂದ ಇಂದು ಮೊದಲ ಹಂತದಲ್ಲಿ ಪರಿಹಾರವನ್ನು ವಿತರಿಸಲಾಗಿದೆ,ಉಳಿಕೆ ಹಣವನ್ನು ಇನ್ನು 15 ದಿನಗಳ ಒಳಗಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ತುಮಕೂರು ತಾಲ್ಲೋಕಿನ ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿ ಯವರ ಮುತವರ್ಜಿಯಿಂದಾಗಿ ಕಂದಾಯಬಾಕಿ ಸಂಗ್ರಹ ಸಂಗ್ರಹಿಸಿ ಉಪಧನ ನಿಯಂತ್ರಣ ಅಧಿಕಾರಿಗಳ ಪ್ರಾಧಿಕಾರಕ್ಕೆ ಜಮಾ ಮಾಡಲಾಯಿತು ಕಾರ್ಮಿಕ ಅಧಿಕಾರಿಗಳು ಆದ ಶ್ರೀಮತಿ ತೇಜಾವತಿ ಯವರು ಕಾರ್ಮಿಕರಿಗೆ ಉಪಧನ ಪಾವತಿಯ ಚೆಕ್ಕುಗಳನ್ನು ಸಂದಾಯ ಮಾಡಿದರು 13 ವರ್ಷಕ್ಕೂ ಹೆಚ್ಚು ಕಾಲ ಪಕ್ಷಿಗಳಂತೆ ಕಾಯುತ್ತಾ ನಿತ್ಯವೂ ಅಲೆದಾಡುತ್ತಿದ್ದ ಕಾರ್ಮಿಕರಿಗೆ ಉಪಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪನವರಿಂದ ಕಡೆಗೂ ನ್ಯಾಯ ಸಿಕ್ಕಂತಾಯಿತು.

ಉಪಧನವನ್ನು ಸ್ವೀಕರಿಸಿದ ಉಮಾಪತಿ, ಟಿ.ಜಿ.ಪ್ರಕಾಶ, ಲಕ್ಷ್ಮಮ್ಮ, ಹಾಗೂ ಭಾಗ್ಯಮ್ಮ ನವರು ಉಪಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪನವರನ್ನು, ತುಮಕೂರು ತಾಲ್ಲೋಕಿನ ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
- ಕೆ.ಬಿ.ಚಂದ್ರಚೂಡ