ತುಮಕೂರು: ಹಿರಿಯ-ಸಹಕಾರಿ-ಧುರೀಣ-ಶಿಕ್ಷಣತಜ್ಞ-ವಕೀಲ- ಬಿ.ವಿ.ವಸಂತಕುಮಾರ್-ಜಿಲ್ಲಾ-ವಕೀಲರ-ಸಂಘದ-ಅಧ್ಯಕ್ಷ-ಸ್ಥಾನಕ್ಕೆ- ಸ್ಪರ್ಧೆ

ತುಮಕೂರು: ಹಿರಿಯ ಸಹಕಾರಿ ಧುರೀಣ,ಶಿಕ್ಷಣ ತಜ್ಞ,ಹಿರಿಯ ವಕೀಲರಾದ ಬಿ.ವಿ.ವಸಂತಕುಮಾರ್ ರವರು ಏ.11 ರಂದು ನಡೆಯುವ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕ್ರಮ ಸಂಖ್ಯೆ 6ರಲ್ಲಿ ಸ್ಪರ್ಧಿಸಿರುತ್ತಾರೆ.

ಬಿ.ವಿ.ವಸಂತಕುಮಾರ್ ರವರು ತುಮಕೂರು ಜಿಲ್ಲೆಯಲ್ಲಿ ಹೆಸರು ಮಾಡಿದವರು,ಹಲವಾರು ಹೋರಾಟಗಳನ್ನು ಮಾಡುತ್ತಾ ಜನ ಸೇವೆಯೇ ಜನಾರ್ಧನ ಸೇವೆ ಎಂದು ಸಾರ್ವಜನಿಕರ ಪರ ಹೋರಾಟ ಮಾಡಿದವರು,1998ರಲ್ಲಿ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ನಂತರ 1999ರಲ್ಲಿ ಹಿರಿಯ ವಕೀಲರಾದ ಆರ್.ನಾಗೇಶ್ ರಾವ್ ಗಾಯಕ್ ವಾಡ್ ರವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ನಂತರ 2001ರಲ್ಲಿ ನಗರದ ಟಿಎಪಿಸಿಎಂಎಸ್ ಬಿಲ್ಡಿಂಗ್ ನಲ್ಲಿ ಸ್ವಂತ ಕಚೇರಿ ಹೊಂದಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಟ್ಟೂರಿನ ವ್ಯವಸಾಯ ಸಹಕಾರ ಸಂಘದಲ್ಲಿ 1995ರಿಂದ ಇಲ್ಲಿಯವರೆವಿಗೂ ಸತತ 5 ಬಾರಿ ಅಧ್ಯಕ್ಷರಾಗಿದ್ದಾರೆ,ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದರು.

ಜಿಲ್ಲಾ ಕೋ-ಆಪರೇಟಿವ್ ಯೂನಿಯನ್ ನಲ್ಲಿ ನಿರ್ದೇಶಕರಾಗಿ,ವಕೀಲರ ವಿವಿಧೊದ್ದೇಶ ಸಹಕಾರ ಸಂಘದ ಸಂಸ್ಥಾಪಕರಾಗಿ, 2015-2020ರವರೆಗೆ ಅಧ್ಯಕ್ಷರಾಗಿ,ಕಿರಿಯ ವಕೀಲರಿಗೆ ಉತ್ತಮ ಮಾರ್ಗದರ್ಶಕರಾಗಿ, ಹಲವು ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ,ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಅಭಿಮಾನಿ ಬಳಗದ ಸದಸ್ಯರಾಗಿ,ಅಹಿಂದ ವರ್ಗದ ಹೋರಾಟಗಾರರಾಗಿ, ಬಡವರು, ಹಿಂದುಳಿದವರು, ರೈತರು, ಮಹಿಳೆಯರು,ನಿರ್ಗತಿಕರಿಗೆ ಸಹಾಯ ಮಾಡುತ್ತಾ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಿದ್ದಾರೆ.

ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ಜಿ.ಎಸ್.ಶಿವನಂಜಪ್ಪನವರ ಅನುಯಾಯಿಗಳಾಗಿದ್ದವರು,ಸರ್ಕಾರದ ವಿವಿಧ ಸಮಿತಿಗಳಲ್ಲಿ ನಿರ್ದೇಶಕರಾಗಿ,ಪದಾಧಿಕಾರಿಗಳಾಗಿ,ಕದಂಬ ಶಿಕ್ಷಣ ಸಂಸ್ಥೆ,ತುಮಕೂರು ಜಿಲ್ಲೆ ಅಧ್ಯಕ್ಷರಾಗಿ, ಕಡಬದ ಎಲೈಟ್ ಇಂಟರ್ ನ್ಯಾಷನಲ್ ಶಾಲೆಯ (ಸಿ.ಬಿ.ಎಸ್.ಸಿ) ಅಧ್ಯಕ್ಷರಾಗಿ ಸುಮಾರು 750 ಜನ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಆ ಶಾಲೆಯಲ್ಲಿ 120 ಜನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬಕ್ಕೆ ಆಧಾರವಾಗಿದ್ದಾರೆ. ಆದ್ದರಿಂದ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ವಿ.ವಸಂತಕುಮಾರ್ ರವರಿಗೆ ಕ್ರಮ ಸಂಖ್ಯೆ 6ಕ್ಕೆ ಎಲ್ಲಾ ಹಿರಿಯ,ಕಿರಿಯ,ಮಹಿಳಾ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ನೀಡಿ ಸಂಘದ ಉತ್ತಮ ನಾಯಕತ್ವಕ್ಕೆ,ಸಂಘದ ಭದ್ರ ಬುನಾದಿಗಾಗಿ, ವಕೀಲರ ಶ್ರೇಯೋಭಿವೃದ್ಧಿಗಾಗಿ, ದಕ್ಷತೆ, ಪ್ರಾಮಾಣಿಕತೆ, ಯಶಸ್ವಿ ನಾಯಕತ್ವಕ್ಕೆ,ಸಂಘದ ಉನ್ನತೀಕರಣ ಮತ್ತು ಅಭಿವೃದ್ಧಿಗಾಗಿ ಆಶೀರ್ವದಿಸಬೇಕೆಂದು ಬಿ.ವಿ.ವಸಂತಕುಮಾರ್ ರವರು ವಕೀಲ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.

ಬಿ.ವಿ.ವಸಂತಕುಮಾರ್ ರವರಿಗೆ ಹಿಂದಿನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಾದ ಟಿ.ಹೆಚ್.ಕುಮಾರ್, ಬಿ.ಆರ್.ದೇವರಾಜು, ಪಿ.ಆರ್.ಹರೀಶ್, ಈಗಿನ ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಜಂಟಿ ಕಾರ್ಯದರ್ಶಿ ಪಾಲಾಕ್ಷಯ್ಯ ಹಾಗೂ ಇತರೆ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದು ವಸಂತಕುಮಾರ್ ರವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?