ತುಮಕೂರು-ಸಮಾಜದ ಆದರ್ಶ ಹೆಣ್ಣು ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ-ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿ

ತುಮಕೂರು: ಗೃಹಿಣಿಯಾಗಿಯೇ, ತನ್ನ ಕುಟುಂಬವನ್ನು ತಿದ್ದಿ, ತೀಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ಭಾರತೀಯ ಗೃಹಿಣಿಯರಿಗೆ ಮಾದರಿಯಾಗಿದ್ದಾರೆ ಎಂದು ತುಮಕೂರು ತಹಶೀಲ್ದಾರ್ ಶ್ರೀಮತಿ ಪಿ.ಎಸ್.ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.

ನಗರದಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ರೆಡ್ಡಿ ಜನಸಂಘ(ರಿ), ವತಿಯಿಂದ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಹೇಮರೆಡ್ಡಿ ಮಲ್ಲಮ್ಮ, ವಿಜ್ಞಾನಿಯಾಗಿರಲಿಲ್ಲ, ವೈದ್ಯರಾಗಿರಲಿಲ್ಲ. ರಾಣಿಯಾಗಿರಲಿಲ್ಲ. ಶಿಕ್ಷಕರು ಅಲ್ಲ, ಆದರು ಅವರನ್ನು ನಾವು ಇಂದು ಪೂಜ್ಯನೀಯ ಭಾವನೆಯಿಂದ ನೋಡುತ್ತಿದ್ದೇವೆಎಂದರೆ, ಅವರು ಸಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸಂತರರೀತಿ ಬದುಕಿದವರು.ಪಾಮರನಾಗಿದ್ದ ಪತಿಯನ್ನು ಪಂಡಿತನಾಗಿಸಿದ್ದಲ್ಲದೆ,ಲೋಪನಾಗಿದ್ದ ಮೈದುನ ವೇಮನನ್ನು ತಪಸ್ವಿಯಾಗಿಸಿದ್ದು ಈಕೆಯ ದೊಡ್ಡ ಸಾಧನೆ ಎಂದರು.

ಸಾಂಸಾರಿಕ ಜೀವನದಲ್ಲಿ ಎಲ್ಲರಿಗೂ ಅತ್ತೆ, ನಾದಿನಿಯರ ಕಾಟ ಇದ್ದದ್ದೇ, ಆದರೆ ಅವೆಲ್ಲವನ್ನು ಮೀರಿ, ತನ್ನ ಸಹನೆ, ತಾಳ್ಮೆ, ಪ್ರೀತಿಯಿಂದ ಮಲ್ಲಿಕಾರ್ಜುನನ್ನೇ ಒಲಿಸಿಕೊಂಡ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ.ಜೀವನದಲ್ಲಿ ನಡೆದ ಅಹಿತಕರ ಘಟನೆಯನ್ನೇ ನೆಪಮಾಡಿಕೊಂಡು ಕೊರಗೆದೆ, ಅದರಿಂದ ಹೊರಬರಲು ಆಧ್ಯಾತ್ಮದ ಮೊರೆ ಹೋಗಿ,ಇಡೀ ಮಹಿಳಾ ಕುಲಕ್ಕೆ ಕಳಸ ಪ್ರಾಯರಾಗಿದ್ದಾರೆ.ಸ್ವಾರ್ಥವಿಲ್ಲದಅವರ ನಡೆ ಇಡೀ ಗೃಹಿಣಿಯರಿಗೆ ಮಾದರಿಯಾದುದ್ದು ಎಂದು ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ನುಡಿದರು.

ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಅವಿಭಕ್ತ ಕುಟುಂಬದ ಓರ್ವ ಸೊಸೆಯಾಗಿ,ತನಗಾದ ಎಲ್ಲ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ಸಮಾಜದ ಎದುರು ಕುಟುಂಬದ ಘನತೆಯನ್ನು ಎತ್ತಿ ಹಿಡಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಶ್ರೀಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ವೇಮನ, ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣ ಇಂತಹದಾರ್ಶಾನಿಕರನ್ನು ಒಂದುಜಾತಿಗೆ ಸಿಮೀತವಾಗಿಸುವುದು ಸರಿಯಲ್ಲ. ವೇದಿಕೆಯಲ್ಲಿ ಅವರತತ್ವ ಸಿದ್ದಾಂತಗಳನ್ನು ಹಾಡಿ ಹೊಗಳುವ ಜನರು, ಕಾರ್ಯಕ್ರಮವನ್ನು ಮಾತ್ರ ಒಂದು ಸಮುದಾಯಕ್ಕೆ ಸಿಮೀತಗೊಳಿಸುವುದು ಸರಿಯಲ್ಲ.ಜಗಜ್ಯೋತಿ ಬಸವಣ್ಣನವರನ್ನು ಒಂದು ಜಾತಿಗೆ ಮಾತ್ರ ಎಂಬಂತೆ ಬಿಂಬಿಸಿರುವುದು ದುರಂತ.ಇದು ಬದಲಾಗಬೇಕು ಎಂದರು.

ರೆಡ್ಡಿ ಜನಾಂಗದವರು ಕೊಡುವವರಾಗಬೇಕೆಂಬುದು ಹೇಮರೆಡ್ಡಿ ಮಲ್ಲಮ್ಮ ಅವರ ಆಶಯವಾಗಿತ್ತು.ಹಾಗಾಗಿ ಮಲ್ಲಿಕಾರ್ಜುನ ಪ್ರೇತ್ಯಕ್ಷವಾಗಿ ನಿನಗೆ ಏನು ಬೇಕು ಎಂದು ಕೇಳಿದಾಗ ತನಗೆ ಏನನ್ನು ಕೇಳದೆ ಸಮುದಾಯ ಸೌಖ್ಯವಾಗಿರುವಂತೆ ಕರುಣಿಸು ಎಂದು ಕೇಳಿಕೊಂಡಿದ್ದಾರೆ.ಇದಕ್ಕಿಂತ ನಿಸ್ವಾರ್ಥ ಬದುಕು ಮತ್ತೊಂದಿಲ್ಲ.ಅಂದಿನ ಅನುಭವ ಮಂಟಪದಲ್ಲಿ ಭಿನ್ನಾಭಿಪ್ರಾಯಗಳು ಅಭಿಪ್ರಾಯಗಳಾಗಿ ಬದಲಾಗುತ್ತಿದ್ದವು. ಅಧುನಿಕ ಅನುಭವ ಮಂಟಪ ಪಾರ್ಲಿಮೆಂಟಿನಲ್ಲಿ ಅಭಿಪ್ರಾಯಗಳಲೇ ಭಿನ್ನಾಭಿಪ್ರಾಯಗಳಾಗಿ ಬದಲಾಗುತ್ತಿರುವುದು ವಿಪರ್ಯಾಸ.ಭಾರತೀಯರು ಕ್ರೌರ್ಯವನ್ನು ಎಂದೂ ಬೆಂಬಲಿಸಿಲ್ಲ. ಹಾಗೆಂದ ಮಾತ್ರಕ್ಕೆ ನೆರೆ ಹೊರೆಯ ರಾಷ್ಟ್ರಗಳನ್ನು ಅದನ್ನೇ ಅಸಹಾಯಕತೆ ಎಂಬಂತೆ ತಿಳಿಯಬಾರದು ಎಂದು ಪೆಹಲ್ಗಾಮ್ ಘಟನೆಯನ್ನು ಪ್ರಾಸ್ತಾಪಿಸಿದರು.

* ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?