ತುಮಕೂರು :ನಗರದ ಪಾಂಡುರಂಗನಗರದಲ್ಲಿರುವ ಕುರುಬ ಹಾಲುಮತ ಸಮಾಜದ ಪುರತನ ಮಠವಾದ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ರೇವಣಸಿದ್ದೇಶ್ವರ ಜಯಂತಿಯನ್ನು ಕಾಳಿದಾಸ ವಿದ್ಯಾವರ್ಧಕ ಸಂಘದ ವತಿಯಿಂದ ಆಚರಿಸಲಾಯಿತು.
ಜಯಂತಿಯ ಪ್ರಯುಕ್ತ ರೇವಣಸಿದ್ದೇಶ್ವರ ಪ್ರತಿಮೆಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ, ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಡಿ.ಎಂ. ಪಾಳ್ಯದ ರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಬಿಂದುಶೇಖರ್ ಒಡೆಯರ್ ಸ್ವಾಮೀಜಿ ಭಾಗವಹಿಸಿ ಸಮಾಜದ ಭಕ್ತರಿಗೆ ಆಶೀರ್ವಾದ ನೀಡಿದರು.
ಶ್ರೀ ಬಿಂದು ಶೇಖರ ಒಡೆಯರ್ ಸ್ವಾಮೀಜಿ ಅವರು ಮಾತನಾಡಿ 4ನೇ ಶತಮಾನದಿಂದ 12 ನೇ ಶತಮಾನದವರೆಗೂ ಇದ್ದ ರೇವಣ್ಣಸಿದ್ದೇಶ್ವರರು ನಾಥ ಪರಂಪರೆಯನ್ನು ವಿರೋಧ ಮಾಡಿ ಸಿದ್ದಿ ಪರಂಪರೆಯನ್ನು ಹುಟ್ಟು ಹಾಕಿದ ದೇವಮಾನವ ಇವರ ತತ್ವಗಳನ್ನು ಮೈಗೂಡಿಸಿಕೊಂಡ ಹಾಲುಮತದ ಸಮುದಾಯ ಅಂದಿನಿಂದ ಇವರನ್ನ ಪೂಜಿಸುತ್ತ ಬಂದಿದೆ ಅದೇ ರೀತಿಯಲ್ಲಿ ತುಮಕೂರಿನಲ್ಲೂ ಅವರ ಅನುಯಾಯಿಗಳಿದ್ದು ಚಿಕ್ಕಪೇಟೆಯಲ್ಲಿ ರೇವಣ ಸಿದ್ದೇಶ್ವರರನ್ನ ಪೂಜಿಸುವ ಕುರುಬ ಸಮುದಾಯದ ಒಡೆಯರ್ ಮನೆತನ ಸಮುದಾಯದ ಸಹಕಾರದಿಂದಾಗಿ ರೇವಣಸಿದ್ದೇಶ್ವರರ ಮಠವನ್ನ ಸ್ಥಾಪನೆ ಮಾಡಿದರು ಕಾಲಾನಂತರ ವಿವಿಧ ಕಡೆಗಳಲ್ಲಿ ಇವರ ಆರಾಧನೆ ಮಾಡುತ್ತಾ ಬಂದಿದ್ದು ಹೀಗಾಗಿ ರೇವಣಸಿದ್ದೇಶ್ವರರು ಕುರುಬ ಸಮುದಾಯದ ಆರಾಧ್ಯ ದೇವರೆಂದು ಬಿಂಬಿತವಾಗಿದ್ದಾರೆ ಎಂದು ತಿಳಿಸಿದರು.

ರೇಣುಕಾಚಾರ್ಯರ ಜಯಂತಿಯ ಸುಸಂದರ್ಭದಲ್ಲಿ ನಮ್ಮ ಒತ್ತಾಯಪೂರ್ವಕವಾದ ಮನವಿ ಏನೆಂದರೆ ಘನ ಸರ್ಕಾರವು ಮಾರ್ಚ್ 12ರಂದು ಆಚರಿಸಲ್ಪಡುವ ರೇಣುಕಾಚಾರ್ಯರ ಜಯಂತಿಯನ್ನು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಯಂತಿ ಎಂದು ಘೋಷಿಸಬೇಕು ಜಿಲ್ಲಾ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಇರಿಸಿ ಗೌರವ ಪೂರ್ವಕವಾಗಿ ಭಕ್ತಿ ಸಮರ್ಪಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಸ್ಥಳೀಯ ಪಾಲಿಕೆ ಸದಸ್ಯ ಮಹೇಶ್ ಅವರು ಮಾತನಾಡಿ, ಭಕ್ತಿ ಪರಂಪರೆ ಇತಿಹಾಸವನ್ನು ಹೊಂದಿರುವ ಹಾಲುಮತದ ಸಮುದಾಯ ದಾಸ ಶ್ರೇಷ್ಠ ಕನಕದಾಸರ ತತ್ವದರ್ಶಗಳನ್ನ ಅಳವಡಿಸಿಕೊಳ್ಳುವುದಲ್ಲದೆ ಶೈವ ಪಂಥದ ರೇವಣ ಸಿದ್ದೇಶ್ವರರನ್ನ ಆರಾಧಿಸಿ ಕೊಂಡು ಬಂದಿರುವುದಕ್ಕೆ ತುಮಕೂರಿನ ಚಿಕ್ಕಪೇಟೆಯ ಈ ಮಠ ಸಾಕ್ಷಿಯಾಗಿದ್ದು ಈ ಮಠದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾದ ಟಿ.ಇ.ರಘುರಾಮ್, ಯೋಗೀಶ್, ಬಸವರಾಜು, ಗುರುಪ್ರಸಾದ್, ಮಣಿ, ಕೃಷ್ಣ, ಪ್ರಕಾಶ್, ಮಂತಾದವರು ಭಾಗವಹಿಸಿದ್ದರು.
-ಕೆ.ಬಿ.ಚಂದ್ರಚೂಡ