ತುಮಕೂರು– ನಗರದ ಜಿಲ್ಲಾ ಬಂಜಾರ ಭವನದಲ್ಲಿ ಕರ್ನಾಟಕ ಬಂಜಾರ ಜಾಗೃತಿದಳ ಸಂಘಟನೆ ವತಿಯಿಂದ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜ ಜಯಂತಿ ಕಾರ್ಯಕ್ರಮ ಹಾಗೂ ಹನುಮಂತ ಲಮಾಣಿ(ಬಿಗ್ ಬಾಸ್ ವಿಜೇತ) ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಸಾವಿರಾರು ಯುವಕರೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಇದಕ್ಕೂ ಮುಂಚಿತವಾಗಿ ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಿಂದ ಲಕ್ಕಪ್ಪ ವೃತ್ತ (ಕಾಲ್‌ಟೆಕ್ಸ್)ದವರೆಗೆ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಮೆರವಣಿಗೆ ಹಾಗೂ ಹನುಮಂತ ಲಮಾಣಿ ರವರಿಗೆ ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬಂಜಾರ ಜಾಗೃತಿ ದಳ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಪ್ಪನಾಯ್ಕ್ ವಹಿಸಿ ಮಾತನಾಡಿ, ಬಂಜಾರ ಸಮಾಜ ಯುವ ಪೀಳಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರಿಯಬೇಕು ಈ ಸಮಾಜದ ರಕ್ಷಣೆಯ ಜವಾಬ್ದಾರಿಯನ್ನು ಯುವಪೀಳಿಗೆ ರೂಡಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕರ್ನಾಟಕ ಬಂಜಾರ ಜಾಗೃತಿದಳ ಸಂಘಟನೆ ಒಳ ಮೀಸಲಾತಿ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷರಾದ ಶಿವಾನಂದ ರಾಥೋಡ್ ಮಾತನಾಡಿ ನಮ್ಮ ಸಂಘಟನೆ ಶಕ್ತಿ ಸಮಾಜವನ್ನು ಹೊಟ್ಟುಗ್ಗೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ನ್ಯಾಯಾಧೀಶರಾದ ಗಣೇಶ್ ನಾಯ್ಕ್ ರವರು ಮಾತನಾಡಿ, ಈ ಹಿಂದೆ ಸರ್ಕಾರದ ವತಿಯಿಂದ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಆದರೆ ಕೇವಲ ಬೆರಳೆಣಿಕೆ ಜನ ಇದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ ಒಬ್ಬ ಯುವ ಹೋರಾಟಗಾರ ತಿಪ್ಪಸರ ನಾಯ್ಕ್ ಇಂದು ವಿಶೇಷವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಸಾವಿರಾರು ಸಂಖ್ಯೆಯಲ್ಲಿ ಯುವಕರನ್ನು ಕರೆತಂದು ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ ವಿಚಾರ ಎಂದರು. ಈ ರೀತಿ ಯಾವುದೇ ಪಕ್ಷಾತೀತವಾಗಿ ಕೆಲಸ ಮಾಡದೆ ವ್ಯಕ್ತಿಗತವಾಗಿ ಕೆಲಸ ಮಾಡದೆ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಒಂದುಗೂಡಿ ಕೆಲಸವನ್ನು ಮಾಡಬೇಕು ಕರ್ನಾಟಕ ಬಂಜಾರ ಜಾಗೃತಿದಳ ರಾಜ್ಯಾಧ್ಯಕ್ಷರಾದ ತಿಪ್ಪಸರ್ ನಾಯ್ಕ್ ಹಾಗೂ ಜಿಲ್ಲಾಧ್ಯಕ್ಷರಾದ ಶಿವಾನಂದ ರಾಠೋಡ್ ರವರ ಕಾರ್ಯ ಶ್ಲಾಘನೀಯ ಯುವಕರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹನುಮಂತ ಲಮಾಣಿ ಬಿಗ್ ಬಾಸ್ ವಿಜೇತ ಆಗಮಿಸಿದ್ದು ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದು. ಹನುಮಂತ ಲಮಾಣಿ ರವರು ಮಾತನಾಡಿ ನನ್ನ ಜಯಕ್ಕೆ ತಿಪ್ಪಸರ್ ನಾಯ್ಕ್ ರವರ ಬೆಂಬಲ ಬಹಳ ಇದೆ ಜೊತೆಗೆ ಸಮಾಜದ ಸಹಕಾರ ಬಹಳ ಇದೆ ಎಂದರು.
ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಸಂಘಟನೆ ಕೇವಲ ಒಂದು ಜಿಲ್ಲೆಗೆ ತಾಲ್ಲೂಕಿಗೆ ಗ್ರಾಮಗಳಿಗೆ ಸೀಮಿತವಾಗದೆ ಇಂದು ಇಡೀ ರಾಜ್ಯಾದ್ಯಂತ ಪ್ರತಿ ತಾಂಡಗಳಿಗೆ ಪ್ರತಿ ತಾಲ್ಲೂಕು ಜಿಲ್ಲೆಗಳಲ್ಲಿ ಮನೆ ಮಾತಾಗಿರುವ ಸಂಘಟನೆ ಈ ಸಂಘಟನೆ ಬಗ್ಗೆ ನನಗೆ ಬಹಳ ಗೌರವ ಇದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಂಜಾರ ಜಾಗೃತಿ ದಳ ರಾಜ್ಯ ಕಾರ್ಯಧ್ಯಕ್ಷರಾದ ಬಿ.ಡಿ ತೋಳಚ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಖ್ಯಾತ ಉದ್ಯಮಿಗಳಾದ ರಮೇಶ್ ನಾಯ್ಕ್.ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ದೇವಿ ಬಾಯಿ. ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ತನುಜಾ ಬಾಯಿ.ಜಿಲ್ಲಾ ಸಂಚಾಲಕರಾದ ನಾರಾಯಣ ನಾಯಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಜಿ ನಾಯಕ್ ಪುರುಷೋತ್ತಮ್ ನಾಯ್ಕ್ ಜಿಲ್ಲಾ ಉಪಾಧ್ಯಕ್ಷರಾದ ಶಾಂತಕುಮಾರ್ ನಾಯ್ಕ್ ಜಿಲ್ಲಾ ನಗರ ಕಾರ್ಯಧ್ಯಕ್ಷರಾದ ಶಶಿಕುಮಾರ್ ನಾಯ್ಕ್. ಮೌನೇಶ್ ರಾಠೋಡ್ ಮತ್ತಿತ ಯುವಕರು ವೇದಿಕೆಯಲ್ಲಿ ಹಾಜರಿದ್ದರು.