ತುಮಕೂರು:ರಾಜ್ಯ ಖೋ ಖೋ ಸಂಸ್ಥೆಯ ಸಮಸ್ಯೆಗಳು, ರಾಜ್ಯದಕ್ರೀಡಾ ನೀತಿ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾ ಖೋ ಖೋ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಸAಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಕ್ರೀಡಾಪಟುಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ರಾಜಕೀಯ ಪ್ರಭಾವದಿಂದ ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಯಮಗಳನ್ನು ಗಾಳಿಗೆ ತೂರಿಯಾವುದನ್ನೂ ಪಾಲಿಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿಗಳನ್ನು ಬದಲಾಯಿಸಿಕೊಂಡು ರಾಜ್ಯ ಅಸೋಸಿಯೇಷನ್ ಅನ್ನು ಬಳಸಿಕೊಂಡಿದ್ದಾರೆ.
ಇವರು ಸತತ 24 ವರ್ಷದಿಂದ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.ಅನಂತರಾಜು ಎಂಬುವವರು 22 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯ ಸಂಬAಧ ಇಟ್ಟುಕೊಳ್ಳದೆ ಕ್ರೀಡಾ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕೆಂಬ ನಿಯಮವಿದ್ದರೂ ಅಧ್ಯಕ್ಷ ಗೋವಿಂದರಾಜು ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತಮ್ಮ ಸರ್ವಾಧಿಕಾರವನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.

ಕಳೆದ ೪೦ ವರ್ಷಗಳಲ್ಲಿ ರಾಜ್ಯದ ಖೋ ಖೋ ತಂಡಗಳು ರಾಷ್ಟç ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಉಳಿಸಿಕೊಂಡು ಬಂದಿವೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ನಮ್ಮ ಖೋ ಖೋ ತಂಡಗಳು ಕೀರ್ತಿ ತಂದಿವೆ. ಆದರೆ ಸರ್ಕಾರದ ಮಟ್ಟದಲ್ಲಿ ಈ ಕ್ರೀಡಾಪಟುಗಳಿಗೆ ಯಾವುದೇ ವಿಶೇಷ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಾರಿಯ ವಿಶ್ವಮಟ್ಟದ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಮತ್ತು ಪುರುಷ ಖೋ ಖೋ ತಂಡಗಳು ಪ್ರಶಸ್ತಿ ಗೆದ್ದಿವೆ. ಈ ತಂಡದಲ್ಲಿ ನಮ್ಮ ರಾಜ್ಯದ ಚೈತ್ರ ಮತ್ತು ಗೌತಮ್ ವಿಜೇತ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ನಮ್ಮ ರಾಜ್ಯದ ಕಳಪೆ ಕ್ರೀಡಾ ನೀತಿಯಿಂದಾಗಿ ಆ ಕ್ರೀಡಾಪಟುಗಳಿಗೆ ಸರಿಯಾದ ಗೌರವ ನೀಡದೆ ಅವಮಾನ ಮಾಡಿದ್ದು ಕ್ರೀಡಾಭಿಮಾನಿಗಳಿಗೆ ಭಾರಿ ನೋವಾಗಿದೆಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಖೋ ಖೋಆಟಗಾರರಿಗೆ ಹೊರ ರಾಜ್ಯಗಳು ನೀಡುವಂತೆ ಎ ಗ್ರೇಡ್ ಮತ್ತು ಬಿ ಗ್ರೇಡ್ ಸರ್ಕಾರಿ ಹುದ್ದೆ ನೀಡಬೇಕು.ಪ್ರತಿಯೊಬ್ಬರಿಗೂ ಕನಿಷ್ಟ ೫೦ ಲಕ್ಷರೂ.ನೆರವು ನೀಡುವ ನಿಯಮರೂಪಿಸಬೇಕು.ರಾಜ್ಯಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ಮನವಿ ಪಡೆದು ನೇರವಾಗಿಅನುದಾನ ನೀಡುವ ಪದ್ದತಿ ಜಾರಿಗೊಳಿಸಬೇಕು. ಈಗ ಇರುವಂತೆ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಮೂಲಕ ಅನುದಾನ ಕೇಳುವ ಪದ್ದತಿ ರದ್ದುಗೊಳಿಸಬೇಕು ಎಂದು ಲೋಕೇಶ್ವರ್ ಸರ್ಕಾರವನ್ನು ಒತ್ತಾಯಿಸಿದರು.
ಶಂಕರ್‌ಕುಮಾರ್ ಎಂ.ಹೆಚ್.ರಾಜು, ಎ.ಎನ್.ಪ್ರಭಾಕರ್, ಧನಿಯಾಕುಮಾರ್, ಕೆ.ಪಿ.ಮಹೇಶ್, ಕನ್ನಡ ಪ್ರಕಾಶ್, ಶ್ರೀನಿವಾಸಮೂರ್ತಿ, ಪ್ರಶಾಂತ್, ಜಿ.ವಿ.ಉಮೇಶ್, ವಿಜಯಕುಮಾರ್, ಅರುಣ್‌ಕುಮಾರ್, ಮೀಸೆ ಸತೀಶ್, ರಾಮಚಂದ್ರರಾವ್, ಶಬ್ಬೀರ್‌ಅಹ್ಮದ್, ಮೊದಲಾದವರು ಭಾಗವಹಿಸಿದ್ದರು.
- ಕೆ.ಬಿ ಚಂದ್ರಚೂಡ್