ತುಮಕೂರು-ವಿದ್ಯಾರ್ಥಿಗಳು-ಮಾನವೀಯ-ಗುಣವನ್ನು-ಬೆಳಸಿಕೊಂಡು-ಉತ್ತಮ-ನಾಗರೀಕರಾಗಿ-ಪಾವಗಡದ-ಶ್ರೀ-ರಾಮಕೃಷ್ಣ-ಸೇವಾಶ್ರಮದ-ಅಧ್ಯಕ್ಷ-ಜಪಾನಂದ-ಸ್ವಾಮೀಜಿ

ತುಮಕೂರು : ವಿದ್ಯಾರ್ಥಿಗಳು ಮಾನವೀಯ ಗುಣವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದ ಇಂಟರ್ನಲ್ ಕ್ವಾಲಿಟಿ ಅಶುರೆನ್ಸ್ ಸೆಲ್ ವಿಭಾಗದಿಂದ ಆಯೋಜಿಸಿದ್ದ “ಲೈಪ್ ಸ್ಕಿಲ್ ಪ್ರೊಫೆಷನಲ್ ಆಂಡ್ ಸೋಸಿಯಲ್ ಎಥಿಕ್ಸ್” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಮಾನದ ಜನರಲ್ಲಿ ಮಾನವವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ ಇದರಿಂದ ಸಮಾಜದಲ್ಲಿ ಸ್ವಾಸ್ಥ ಹಾಳಾಗುತ್ತಿದೆ.

ಹಾಗಾಗಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಹೃದಯವಂತರಾಗಬೇಕು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಎಲ್ಲರಲ್ಲಿರುವ ಆತ್ಮವೂ ಕೂಡ ಪವಿತ್ರವಾದವು ಆದರೆ ಸ್ವಾರ್ಥದಿಂದ ನಾವು ಹಲವಾರು ತಪ್ಪುಗಳನ್ನು ಮಾಡುತ್ತಿದ್ದೇವೆ. ಹಾಗಾಗಿ ನಾವು ಉತ್ತಮ ಚಿಂತನೆಗಳನ್ನು ಮಾಡಿ ಅದರಂತೆ ನಡೆಯಬೇಕು, ಯುವಕರು ಯಾವಾಗಲೂ ಭಯ ಪಡದೆ ಧೈರ್ಯವಾಗಿರಬೇಕು ಎಂದು ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿ ತುಂಬುತ್ತಿದ್ದರು ಎಂದು ಹೇಳಿದರು.


ನಾವು ಒಂದು ಯೋಜನೆಯನ್ನು ಕೈಗೆತ್ತಿಕೊಂಡರೆ ಅದರ ಬಗ್ಗೆ ಕನಸು ಕಾಣಿ, ಆ ಯೋಜನೆಯ ಕುರಿತು ಯೋಚಿಸಿ, ಆ ಯೋಜನೆಯೊಂದಿಗೆ ಬದುಕಿ ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಲವಾರು ನಿದರ್ಶನಗಳನ್ನು ನೀಡುವುದರ ಮೂಲಕ ವಿಧ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.

ಸಾಹೇ ವಿಶ್ವ ವಿದ್ಯಾನಿಲಯದ ಉಪಕುಲಾಧಿಪತಿಗಳಾದ ಡಾ. ಕೆ.ಬಿ. ಲಿಂಗೇಗೌಡ ಮಾತನಾಡಿ ಸ್ವಾಮೀಜಿಗಳ ಮಾರ್ಗದರ್ಶನದಿಂದ ನಮ್ಮ ವಿದ್ಯಾರ್ಥಿಗಳು ಉತ್ತಮವಾದ ಆದರ್ಶಗಳನ್ನು, ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್, ಡೀನ್ ಎಸ್.ರೇಣುಕಲತಾ ಹಾಗೂ ಎಲ್ಲಾ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?