ತುಮಕೂರು-ವಿದ್ಯಾರ್ಥಿಗಳು-ಹೊಸ-ಹೊಸ-ತ್ರಂತ್ರಜ್ಞಾನವನ್ನು- ಅರಿಯಬೇಕು-ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂಎಸ್ ರವಿಪ್ರಕಾಶ್

ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ ಮಾತ್ರ ವೃತ್ತಿ ಜೀವನದಲ್ಲಿ ಬರುವ ಸಲಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂಎಸ್ ರವಿಪ್ರಕಾಶ್ ತಿಳಿಸಿದರು.


ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದ ಎಲೆಕ್ಟ್ರಿಕಲ್ ಸೆಮಿನಾರ್ ನಲ್ಲಿ ನಡೆದ ಇಂಡಸ್ಟ್ರಿಯಲ್ ಆಟೋಮೇಷನ್ ಎಂಬ ವಿಷಯದ ಕುರಿತು ಹತ್ತು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಭಿವೃದ್ಧಿಯಾಗಿರುವ ಕೃತಕ ಬುದ್ದಿಮತ್ತೆಯಂತಹ ತ್ರಂತ್ರಜ್ಞಾನವು ಸಾಕಷ್ಟು ಕ್ಷೇತ್ರವನ್ನು ಆವರಿಸಿದೆ. ಇಂತಹ ತಂತ್ರಜ್ಞಾನಗಳ ಅರಿವು ನಿಮಗಿದ್ದರೆ ತಾಂತ್ರಿಕ ಯುಗದಲ್ಲಿ ನೀವು ಉಳಿಯಲು ಸಾಧ್ಯವಾಗುತ್ತದೆ. ಕಲಿಕೆ ನಿರಂತರವಾದ್ದು ಪ್ರತಿನಿತ್ಯವೂ ಹೊಸತನ್ನು ಕಲಿಯುತ್ತಿರಬೇಕು ಎಂದು ತಿಳಿಸಿದರು.


ಎಚ್‌ಎಂಎಸ್ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ. ತ್ಯಾಗರಾಜು ಮಾತನಾಡಿ. ವಿದ್ಯಾರ್ಥಿಗಳು ಪ್ರೆಶ್ನೆಕೇಳುವ ಮನೋಭಾವವನ್ನು ರೂಡಿಸಿಕೊಳ್ಳಿ. ಪ್ರೆಶ್ನೆ ಕೇಳುವುದರಿಂದ ಗೊಂದಲಗಳಿಗೆ ಪರಿಹಾರ ಸಿಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.


ಕಾರ್ಯಗಾರದಲ್ಲಿ ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರಾದ ಡಾ. ರಾಜೇಶ್ ಕಾಮತ್, ಡಾ.ಜಿ.ಎಸ್ ಶೇಷಾದ್ರಿ, ವಿಭಾಗದ ಮುಖ್ಯಸ್ಥ ಡಾ. ಎನ್ ಪ್ರದೀಪ್, ಸಹಾಯಕ ಪ್ರಾಧ್ಯಾಪಕ ಡಾ.ಯೋಗಾನಂದ ಬಿ.ಎಸ್, ಡಿ.ವಿ ವೇಣುಗೋಪಾಲ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?