ತುಮಕೂರು: ಶಿರಾ ತಾಲ್ಲೂಕು ಚಂಗಾವರ ಸರ್ಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಿಕ್ಷಕರಿಗೆ ಗುರುವಂದನೆಯ ಗೌರವ ಸಲ್ಲಿಸಿ, ನಿವೃತ್ತ ಶಿಕ್ಷಕರಿಗೆ ಆದರದ ಬೀಳ್ಕೊಡುಗೆ ನೀಡಿದರು.
ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಜಿ.ಮಂಜುನಾಥ್ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿ, ಅವರ ಸೇವೆ ಸ್ಮರಿಸಿದರು. ಇದರ ಅಂಗವಾಗಿ ಹೆಸರಾಂತ ಜಾನಪದ ಗಾಯಕ ಗೋ.ನಾ.ಸ್ವಾಮಿ ಅವರಿಂದ ಗೀತ ಗಾಯನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು.

ಸಿರಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹರೀಶ್‌ರವರು ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು,ಗಡಿಯಾರದ ಸೆಕೆಂಡ್ ಮುಳ್ಳಿನ ರೀತಿ ಪ್ರತಿ ನಿತ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಶಿಷ್ಯರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ ಶಿಕ್ಷಕರು ತಮ್ಮ 30 ವರ್ಷಕ್ಕೂ ಹೆಚ್ಚಿನ ಸೇವಾ ಅವಧಿಯನ್ನು ಕಳೆದು ಇಂದು ವಯೋ ನಿವೃತ್ತರಾಗುತ್ತಿಯಾಗುತ್ತಿದ್ದಾರೆ.
ಅವರನ್ನು ಸನ್ಮಾನಿಸಿ ಗೌರವಿಸುವುದು ನಮಗೆಲ್ಲರಿಗೂ ಹೆಮ್ಮೆ,ಒಬ್ಬ ಒಳ್ಳೆಯ ಶಿಕ್ಷಕ ಹಳ್ಳಿಯ ಅಭಿವೃದ್ಧಿಯ ಯಶಸ್ಸಿನ ಗುಟ್ಟು, ಎಷ್ಟೋ ಜನ ಶಿಕ್ಷಕರು ತಮ್ಮ ಸಂಬಳದ ಹಣದಲ್ಲಿ ತನ್ನ ವಿದ್ಯಾರ್ಥಿಗೆ ಫೀಜು,ಬಟ್ಟೆ,ಪುಸ್ತಕ ಕೊಡಿಸಿ ವಿಧ್ಯಾರ್ಥಿಯ ಅಭಿವೃದ್ಧಿಗೆ ಕಾಣಿಕೆ ನೀಡಿದ್ದಾರೆ ಅವರ ಕಾಯಕ ಶ್ರೇಷ್ಠ ಕಾಯಕ ಎಂದು ಹೆಮ್ಮೆಯಿಂದ ಹೇಳಿದರು.

ಈ ವೇಳೆ ತೆಂಗು ಮತ್ತು ನಾರುಅಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಡರಾದ ಮೋಹನ್‌ಕುಮಾರ್, ಬಾಲಕೃಷ್ಣ, ಶಿವುಚಂಗಾವರ, ನಟರಾಜು, ಚಿಕ್ಕಣ್ಣ, ಈರಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ