ತುಮಕೂರು: ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್(ಟಿಜಿಎಂಸಿ) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆ ಹೊರತುಪಡಿಸಿ, ಉಳಿದ 17 ಮಂದಿ ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
ಎನ್.ಆರ್.ಅಕ್ಷಯ್ 2604 ಮತಗಳನ್ನು ಪಡೆದು ಹೆಚ್ಚು ಮತಗಳಿಂದ ಜಯಶೀಲರಾಗಿದ್ದು, ಹಾಲಿ ಅಧ್ಯಕ್ಷ ದಿವ್ಯಾನಂದಮೂರ್ತಿ 2532 ಮತಗಳನ್ನು ಪಡೆದು ಮತ್ತೆ ಬ್ಯಾಂಕ್ ಆಡಳಿತ ಮಂಡಳಿ ಪ್ರವೇಶಿಸಿದ್ದಾರೆ.

ಉಳಿದಂತೆ ಸಿ.ಆರ್.ನಟರಾಜ್, ಎಸ್.ಬಿ. ಪ್ರಭು, ಬಲರಾಮಶೆಟ್ಟಿ, ನಟರಾಜ್ ಟಿ.ಎಲ್. ಎಂ.ಪಿ.ಮಹೇಶ್, ಟಿ.ಡಿ.ಬಾಹುಲಬಿಬಾಬು, ಆರ್.ಎ.ಸುರೇಶ್‌ಕುಮಾರ್, ಪಾಯೇಶ್‌ಕುಮಾರ್ ಎಚ್.ಜಿ., ಎಂ.ದೀಪಕ್, ಜಿ.ಎಸ್.ರಮೇಶ್, ರೇವಂತ್ ಟಿ.ಎಸ್, ನಯನ ಎಂ., ರಶ್ಮಿ ಬಿ.ವಿ., ಕೆ.ರಾಮಯ್ಯ, ಡಿ.ವಿ.ಉಮೇಶ್ ಚುನಾಯಿತರಾಗಿದ್ದಾರೆ.
ಹಿಂದುಳಿದ ವರ್ಗ ಎ ನಿರ್ದೇಶಕ ಸ್ಥಾನದಿಂದ ಟಿ.ಆರ್.ಸುರೇಶ್ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾದ ನಿರ್ದೇಶಕ ಸ್ಥಾನಕ್ಕೆ ಸಂತ ತುಕಾರಾಂ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಕೆ.ಎಸ್.ಹರೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಧಾನ್ಯವರ್ತಕರ ಸಂಘದ ಬೆಂಬಲಿತರು ಆಡಳಿತ ಮಂಡಳಿ ಸ್ಥಾನಗಳನ್ನು ಗೆದ್ದಿರುವುದಕ್ಕೆ ಸಂಘದ ಅಧ್ಯಕ್ಷ ಬಿ.ಎಲ್.ಚಂದ್ರಕೀರ್ತಿ, ಉಪಾಧ್ಯಕ್ಷ ಸಿ.ಎನ್.ಎಲ್.ನಂಜುಂಡಪ್ಪ ಕಾರ್ಯದರ್ಶಿ ಬೆಟ್ಟಯ್ಯ ಇತರ ಪದಾಧಿಕಾರಿಗಳು ಶುಭಕೋರಿದ್ದಾರೆ.
– ಕೆ. ಬಿ.ಚಂದ್ರಚೂಡ್