ತುಮಕೂರು-ಸ್ವತಂತ್ರ-ಭಾರತದ-ಕನಸು-ಕಂಡವರು-ಅಂಬೇಡ್ಕರ್-ಪ್ರೊ.ಎಂ.ವೆಂಕಟೇಶ್ವರಲು


ತುಮಕೂರು: ಸ್ವಾತಂತ್ರಪೂರ್ವದಲ್ಲಿಯೇ ಸ್ವಾತಂತ್ರ ಭಾರತ ಹೇಗಿರಬೇಕು ಎಂಬ ಕನಸು ಕಂಡವರು ಅಂಬೇಡ್ಕರ್, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಹಲವು ದೇಶಗಳ ಸಂವಿಧಾನವನ್ನು ಆಧ್ಯಯನ ಮಾಡಿ, ಸಮಾನತೆ, ಭಾತೃತ್ವದ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಎಲ್ಲರೂ ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೆ ಬದುಕುವಂತಹ ಅವಕಾಶ ಕಲ್ಪಿಸಿದ ಅಂಬೇಡ್ಕರ್ ಇಂದಿನ ಯುವಪೀಳಿಗೆಗೆ ಮಾದರಿ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ.


ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಅವರು, ತುಮಕೂರು ವಿವಿಯ ವಿವಿಧ ವಿಭಾಗಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಅಂಬೇಡ್ಕರ್ ಅವರನ್ನು ಯುವಜನರು ಓದುವುದರಿಂದ ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ರೂಪಗೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಅಂಬೇಡ್ಕರ್ ರವರಲ್ಲಿದ್ದ ಜ್ಞಾನ, ನಿರಂತರವಾಗಿ ಪುಸ್ತಕಗಳನ್ನು ಓದುತ್ತಲೇ, ಅದರಲ್ಲಿ ಜ್ಞಾನವನ್ನು ತನ್ನಾಗಿಸಿಕೊಂಡು, ಬಡವರು, ದೀನದಲಿತರು, ಸಮಾಜದ ಎಲ್ಲ ಸ್ತರದ ಜನರು ಸಮಾನವಾಗಿ ಬದುಕಲು ಬೇಕಾದ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಅವರು ಲಂಡನ್ನಿನಲ್ಲಿ ಓದುವಾಗ ತಮ್ಮ ಪತ್ನಿ ರಮಾಬಾಯಿ ಅವರಿಗೆ ಪತ್ರದಲ್ಲಿ ನೀಡಿರುವ ಸಂದೇಶ ಇಂದಿಗೂ ಅವಿಸ್ಮರಣಿಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹದೊಂದು ಕಾರ್ಯಕ್ರಮದ ಮೂಲಕ ಯುವಜನರ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೊ.ವೆಂಕಟೇಶ್ವರಲು ಮೆಚ್ಚುಗೆ ವ್ಯಕ್ತಪಡಿಸಿದರು.


ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕೆಲವೇ ಜಾತಿಗೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇಂತಹ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ರಾಜ್ಯ ಸರಕಾರ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ.ಭಾರತೀಯ ಪ್ರತಿ ಪ್ರಜೆಯ ಹುಟ್ಟಿನಿಂದ ಸಾಯುವವರೆಗೂ ಸಂವಿಧಾನ ಅವನ ಬೆನ್ನಿಗೆ ನಿಲ್ಲುತ್ತದೆ.

ಪ್ರತಿ ಮಗುವಿನ ವಿದ್ಯಾಭ್ಯಾಸ, ಉದ್ಯೋಗ,ಘನತೆಯ ಜೀವನ, ಘನತೆಯಿಂದ ಅಂತ್ಯ ಸಂಸ್ಕಾರದ ವರೆಗೂ ಸಂವಿಧಾನದ ವಿವಿಧ ಕಲಂಗಳು ಕೆಲಸ ಮಾಡುತ್ತೇವೆ.ಒಂದು ಸಣ್ಣ ವಸ್ತುವಿಗೂ ವಿದೇಶಗಳ ಕಡೆಗೆ ನೋಡಬೇಕಾಗಿದ್ದ ಸ್ವಾತಂತ್ರ ಭಾರತ ಇಷ್ಟು ಅಭಿವೃದ್ಧಿ ಶೀಲ ರಾಷ್ಟçವಾಗಲು ನಮ್ಮ ಸಂವಿಧಾನವೇ ಕಾರಣ.ಹಾಗಾಗಿ ಮತ್ತೆ ಮತ್ತೆ ನಾವು ಅಂಬೇಡ್ಕರ್ ಅವರನ್ನು ಓದುವ, ಅವರ ವಿಚಾರಧಾರೆಗಳಿಗೆ ಮುಖಾಮುಖಿಯಾಗುವ ಕೆಲಸವನ್ನು ಮಾಡುವ ಮೂಲಕ ಇಂದಿನ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.


ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಾ.ಬಾಬಾ ಸಾಹೇಬ್ ಜೀನರಾಳ್ಕರ್, ಅಂಬೇಡ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ .ಏಕ ಕಾಲಕ್ಕೆ ಓರ್ವ ಕಾನೂನು ತಜ್ಞನಾಗಿ,ಇತಿಹಾಸಕಾರನಾಗಿ, ಅರ್ಥಶಾಸ್ತ್ರ ತಜ್ಞನಾಗಿ, ಶಿಕ್ಷಣ ತಜ್ಞ, ಸಾಮಾಜಿಕ ತಜ್ಞ, ಸಾಮಾಜಿಕ ಹೋರಾಟಗಾರರಿಗೂ ಹಲವಾರು ಮಜಲುಗಳನ್ನು ತೋರಿಸಿದ್ದಾರೆ.

ಅವರ 25 ವರ್ಷಗಳ ಜೀವಿತ ಅವಧಿಯಲ್ಲಿ ಹಲವಾರು ಅಪಮಾನಗಳನ್ನು ಅನುಭವಿಸಿ,ಶೋಷಿತ ಸಮುದಾಯಗಳು ತಲೆ ಎತ್ತಿ ಬದುಕುವಂತಹ ಸಂವಿಧಾನ ನೀಡಿದರು. ೧೯೧೯ರಲ್ಲಿ ಸೌತ್ ಬ್ಯೋರ ಕಮಿಷನ್, ೧೯೨೪ರ ಸೈಮನ್ ಕಮಿಷನ್ ಹಾಗೂ ೧೯೩೧ರಿಂದ ೩೪ವರೆಗೆ ನಡೆದ ದುಂಡುಮೇಜಿನ ಸಭೆಗಳಲ್ಲಿ ಭಾರತದ ಎಲ್ಲಾ ಪ್ರಜೆಗಳಿಗೂ ಮತದಾನದ ಹಕ್ಕು ನೀಡಬೇಕೆಂಬ ಒತ್ತಡ ತಂದು, ಕೆಲವರಿಗೆ ಸಿಮೀತವಾಗಿದ್ದ ಮತದಾನದ ಹಕ್ಕನ್ನು ಎಲ್ಲರಿಗೂ ಸಿಗುವಂತೆ ಮಾಡಿದ್ದ ಅಂಬೇಡ್ಕರ್, ಅವರ ಮಹಾಡ್ ಕೆರೆ ಹೋರಾಟ, ಮನುಸೃತಿ ಸುಡುವ ಹೋರಾಟಗಳು ಇಡೀ ದೇಶದ ಚಳವಳಿಯ ದಿಕ್ಕನೇ ಬದಲಿಸಿತು ಎಂದರು.


ಶಂಕರಾನಂದ್ ಎಂ.ಬಿ., ಈಶ್ವರ್ ಮಿರ್ಜಿ, ಡಾ.ಲಕ್ಷ್ಮಿ ರಂಗಯ್ಯ, ಡಾ.ಲಕ್ಷ್ಮಣದಾಸ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ್

Leave a Reply

Your email address will not be published. Required fields are marked *

× How can I help you?