ತುಮಕೂರು: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಜ್ಞಾನ ಅತಿ ಮುಖ್ಯ ಓದಿನಲ್ಲಿ ಕುತೂಹಲ ಹೆಚ್ಚಾದಾಗ ಮಾತ್ರ ಜೀವನ ಬದಲಾಗುತ್ತದೆ ಮತ್ತು ಪ್ರಶ್ನೆ ಮಾಡದೆ ಯಾವುದನ್ನು ಸ್ವೀಕರಿಸಬೇಡಿ ಕಲಿಯುವಿಕೆಯಲ್ಲಿ ಜಾತಿ, ಭೇದ, ವರ್ಣ, ಇರಬಾರದು ಹಾಗೂ ಬರೆಯುವ ಬರವಣಿಗೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ ಹಾಗೇ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಒಳಗಾಗಬೇಡಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತುಮಕೂರಿನ ಡಿಡಿಪಿಯು ವಿನ ಅಧಿಕಾರಿಯದ ಡಾ. ಬಾಲ ಗುರುಮೂರ್ತಿ ರವರು ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ವಿಜ್ಞಾನ ವಿಭಾಗ ವತಿಯಿಂದ ಮೇಘ ಕ್ವಿಜ್ 2025 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಕ್ಷರತೆಯು ಬದಲಾಗಿದೆ ಬದಲಿಗೆ ಮಾಹಿತಿ, ಮಾಧ್ಯಮ, ಡಿಜಿಟಲ್, ಸಾಕ್ಷರತೆಯಾಗಿದೆ ಹಾಗೂ ಜ್ಞಾನ ಎಂದರೆ ನಿನ್ನನ್ನು ನೀನು ಅರಿತುಕೊಳ್ಳುವುದು. ಈಗಿನ ಯುಗದಲ್ಲಿ ಕೌಶಲ್ಯಗಳು ಪ್ರಮುಖವಾಗಿವೆ ಕೌಶಲ್ಯಗಳಿಂದ ಬದುಕು ರೂಪುಗೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ವಿಜ್ ನ ಕೋ ಆಡಿನೇಟರ್ ಮತ್ತು ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ವಿನೋದ.ಕೆ,ಕಾಲೇಜಿನ ಪ್ರಾಂಶುಪಾಲ ಡಾ ಪಿ ಹೇಮಲತಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹನುಮಂತರಾಯ ಎಚ್ ,ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹನುಮಂತರೆಡ್ಡಿ, ಹಾಗೂ ಐಕ್ಯೂ ಏ ಸಿ ಮತ್ತು ಎಂಕಾಂ ವಿಭಾಗದ ಮುಖ್ಯಸ್ಥ ಸೈಯದ್ ಬಾಬು ಎಚ್ ಬಿ ಹಾಗೂ ವಿಜ್ಞಾನ ವಿಭಾಗದ ಎಲ್ಲ ಬೋಧಕ ವರ್ಗದವರು ಹಾಗೂ ಎಲ್ಲಾ ವಿಭಾಗದ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .