ತುಮಕೂರು-ಫೆ.23ರಂದು-ತುಮಕೂರಿಗೆ-ನಂದಿ-ರಥಯಾತ್ರೆ-ಆಗಮನ-ಅದ್ಧೂರಿ-ಸ್ವಾಗತಕ್ಕೆ-ಸ್ವಾಗತ-ಸಮಿತಿ-ಸಜ್ಜು

ತುಮಕೂರು: ಗೋಸೇವಾಗತಿಕರ್ನಾಟಕ,ರಾಧಾಸುರಭಿ ಗೋಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇವರ ವತಿಯಿಂದ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯುತ್ತಿದ್ದು ಫೆ.೨೩ರಂದು ಸಂಜೆ ೪ ಗಂಟೆಗೆ ನಗರದ ಟೌನ್ ಹಾಲ್ ಗೆ ತಿಪಟೂರಿನಿಂದ ಆಗಮಿಸುತ್ತಿದ್ದು ಶ್ರೀ ಸಿದ್ಧಲಿಂಗಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಪೂರ್ಣ ಕುಂಭ,ಮಂಗಳವಾದ್ಯ,ಜನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ,ಗೃಹಸಚಿವ ಡಾ||ಜಿ.ಪರಮೇಶ್ವರ,ಕೆ.ಎನ್.ರಾಜಣ್ಣ,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ, ಎಂದು ನಂದಿ ರಥಯಾತ್ರೆಯ ಸ್ವಾಗತ ಸಮಿತಿಯ ಅಧ್ಯಕ್ಷ ಕೋರಿ ಮಂಜುನಾಥ್ ರವರು ತಿಳಿಸಿದರು.

ಅವರು ಇಂದು ನಗರದ ಕೆ.ಆರ್.ಬಡಾವಣೆಯ ರಾಮಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಂದು ಸಂಜೆ 5.30 ಕ್ಕೆ ನಗರದ ಹೈಸ್ಕೂಲ್ ಮೈದಾನದಲ್ಲಿ ವಿಷ್ಣು ಸಹಸ್ರನಾಮಪಾರಾಯಣ ಹಾಗೂ ಗೋಪೂಜೆ ನಡೆಯಲಿದ್ದು, ನಂತರ ಶ್ರೀ ಸಿದ್ದಲಿಂಗಸ್ವಾಮೀಜಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ಡಾ||ಶ್ರೀ ಶಿವಾನಂದಶಿವಾಚಾರ್ಯ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಗುರುರಾಜಕುಲಕರ್ಣಿ ಭಾಗವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಕೋರಿ ಮಂಜುನಾಥ್ ವಹಿಸಲಿದ್ದಾರೆ ಎಂದು ತಿಳಿಸಿದರು.

     ಸ್ವಾಗತ ಸಮಿತಿಯ ಖಜಾಂಚಿ ಡಾ||ಎಸ್.ಪರಮೇಶ್ ರವರು ಮಾತನಾಡಿ, ಸಭಾ ಕಾರ್ಯಕ್ರಮದ ನಂತರ ಶ್ರೀಸಾಯಿರಾಮನ್ ನೃತ್ಯಕೇಂದ್ರದಿಂದ ಪುಣ್ಯಕೋಟಿ ನೃತ್ಯರೂಪಕವನ್ನು ಏರ್ಪಡಿಸಲಾಗಿದೆ. ನಂದಿ ಗೋಸಂಪತ್ತನ್ನು ಉಳಿಸುವ ಮೂಲಕ ವಿಷಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ರೋಗ ಮುಕ್ತಭಾರತ, ಸಹಜಕೃಷಿ ವಿಸ್ತರಣೆ,ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸಲು, ಗ್ರಾಮ ವಿಕಾಸ, ಗ್ರಾಮೀಣ ಉದ್ಯೋಗ ಸೃಷ್ಠಿ ತನ್ಮೂಲಕ ಸಮೃದ್ಧ ಭಾರತ ನಿರ್ಮಾಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

      ಆದ್ದರಿಂದ ಜಿಲ್ಲೆಯ ಎಲ್ಲ ಕೃಷಿಕರು,ಗೋವನ್ನು ಆರಾಧಿಸುವವರು,ರೈತರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

      ಸಾರ್ವಜನಿಕರಿಗೆ ಗೋಪೂಜೆ ಮಾಡಲು ಅವಕಾಶವಿದ್ದು ನೋಂದಣಿಗೆ ಪ್ರಾಣೇಶ್ ಕುಮಾರ್ ( 9844374526 ) ಮತ್ತು ವಾಸವಿಗುಪ್ತ ( 9900735709 ) ಇವರನ್ನು ಸಂಪರ್ಕಿಸಬೇಕೆಂದು ತಿಳಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಮಹೇಂದ್ರ ವೈಷ್ಣವ್,ಅನಂತರಾಮು,ಪ್ರಾಣೇಶ್ ಕುಮಾರ್,ಜಿ.ಎಸ್.ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?