ತುಮಕೂರು-ವಾಜಪೇಯಿ-ಜನ್ಮ-ಶತಾಬ್ದಿ-ಬಿಜೆಪಿ ಕಟ್ಟಿ ಬೆಳೆಸಿದ- ಹಿರಿಯರಿಗೆ-ಗೌರವಾರ್ಪಣೆ


ತುಮಕೂರು:
ಮಾಜಿ ಪ್ರಧಾನ ಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನವನ್ನು ವರ್ಷ ಪೂರ್ತಿ ಸ್ಮರಣೀಯವಾಗಿ ಆಚರಿಸಲು ಬಿಜೆಪಿ ವಿವಿಧ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಭಾಗವಾಗಿ ಅಟಲ್‌ಜಿ ಅವರ ಜನ್ಮ ಶತಾಬ್ದಿ ಅಂಗವಾಗಿ ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿದವರು, ಆಗಿನಿಂದ ಪಕ್ಷ ಸಂಘಟನೆಗೆ ದುಡಿದ ಹಿರಿಯರನ್ನು ಜಿಲ್ಲಾ ಬಿಜೆಪಿಯಿಂದ ಗೌರವಿಸಲಾಯಿತು.


ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿಯವರ ನೇತೃತ್ವದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಗೂ ಮುಖಂಡರು ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿದ್ದ ನಗರದ ಹಲವು ಹಿರಿಯರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.


ಲೋಕಸಭೆಯ ಮಾಜಿ ಉಪ ಸಭಾಪತಿ ದಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ, ಮಲ್ಲಿಕಾರ್ಜುನಯ್ಯನವರ ಪತ್ನಿಜಯದೇವಮ್ಮ ಅವರನ್ನು ಗೌರವಿಸಿದರು.ತಮ್ಮ ಪತಿ ಲೋಕಸಭೆಯ ಉಪ ಸಭಾಪತಿಯಾಗಿದ್ದ ಅವಧಿಯಲ್ಲಿ ತಾವುದೆಹಲಿಯಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದ ಸಂದರ್ಭವನ್ನು ಜಯದೇವಮ್ಮ ಅವರು ಸಂಭ್ರಮದಿAದ ಹಂಚಿಕೊಂಡರು.

ಅಟಲ್‌ಜೀಅವರ ಹೋರಾಟಗಳಿಂದ ಪ್ರೇರೇಪಿತರಾಗಿ ಪಕ್ಷದ ಹೋರಾಟಗಳಲ್ಲಿ ಭಾಗಿಯಾಗಿ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದ ಕಾಂಡಿಮೆAಟ್ ಶಿವಣ್ಣ ಅವರನ್ನು ಬಿಜೆಪಿ ಮುಖಂಡರು ಅವರ ಬಳಿಗೇ ಹೋಗಿ ಗೌರವಿಸಿದರು.ವಾಜಪೇಯಿ ಅವರು ತುಮಕೂರಿಗೆ ಆಗಮಿಸಿದ್ದ ಸಂದರ್ಭಗಳನ್ನು ನೆನಪಿಸಿಕೊಂಡ ಶಿವಣ್ಣನವರು,ಅದರ ನೆನಪಿನ ಫೋಟೋಗಳನ್ನು ಹಂಚಿಕೊಂಡರು.


ಅಟಲ್ ಬಿಹಾರಿಯವರಕಟ್ಟಾಭಿಮಾನಿಯಾದಹಿರಿಯ ಮುಖಂಡನAಜೇಗೌಡರ ಮನೆಗೆ ಮುಖಂಡರನ್ನು ಭೇಟಿ ನೀಡಿ, ಪಕ್ಷದ ಸೇವೆಗಾಗಿ ಅವರಿಗೆಗೌರವ ಸಲ್ಲಿಸಿದರು. ವಾಜಪೇಯಿ ಅವರೊಂದಿಗಿನ ಒಡನಾಟ, ತುಮಕೂರಿನಲ್ಲಿ ಅವರ ಕಾರ್ಯಕ್ರಮ ಆಯೋಜನೆಗೆ ತಾವು ಶ್ರಮಿಸಿದ್ದು, ಗುಬ್ಬಿಯಲ್ಲಿ ತಾವು ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಿದ್ದಾಗ ವಾಜಪೇಯಿ ಅವರನ್ನು ಗುಬ್ಬಿಗೆ ಆಹ್ವಾನಿಸಿದ ಸಂದರ್ಭಗಳನ್ನು ನಂಜೇಗೌಡರು ಅಭಿಮಾನದಿಂದ ಮೆಲುಕು ಹಾಕಿದರು.


ಹಿರಿಯ ಬಿಜೆಪಿ ಮುಖಂಡ ಪಿ.ಕೃಷ್ಣಪ್ಪ ಪಿ.ಸದಾಶಿವಯ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹಿರಿಯರ ಭೇಟಿ, ಗೌರವಾರ್ಪಣೆ ಸಂದರ್ಭದಲ್ಲಿ ಅಂಬಿಕಾ ಹುಲಿನಾಯ್ಕರ್, ಸಂದೀಪ್‌ಗೌಡ,ಧನುಷ್, ಜಿಲ್ಲಾ ಮಾಧ್ಯಮ ಸಂಯೋಜಕರಾದ ಜೆ.ಜಗದೀಶ್, ಮೊದಲಾದವರು ಭಾಗವಹಿಸಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?