ತುಮಕೂರು: ನಗರದ ಮಹಾಲಕ್ಷ್ಮಿ ಬಡಾವಣೆ ವಾಸಿ ಶಿವಣ್ಣ ಟೈರ್ಸ್ ಮಾಲಿಕರಾದ ಕಾರ್ತಿಕ್ ರವರ ಕಟ್ಟಡ ಕಾರ್ಮಿಕರ ಶೆಡ್ ನಲ್ಲಿ ಕಾಣಿಸಿಕೊಂಡ 43 ಕೊಳಕುಮಂಡಲ (ರಸೆಲ್ಸ್ ವೈಪರ್) ಮರಿಗಳು ಹಾಗೂ 4 ಅಡಿ ಉದ್ದದ ತಾಯಿ ಕೊಳಕುಮಂಡಲ ಹಾವನ್ನು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ರವರು ಸುರಕ್ಷಿತವಾಗಿ ರಕ್ಷಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈ ಹಾವುಗಳು ನವೆಂಬರ್ ಡಿಸೆಂಬರ್ ನಲ್ಲಿ ಮಿಲನಗೊಂಡು ಪೂರ್ವ ಮುಂಗಾರು ಸಮಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಕೊಳಕುಮಂಡಲ ಹಾವುಗಳು ಅಂದರೆ ತಾಯಿಯ ದೇಹದೊಳಗೆ ಮೊಟ್ಟೆಗಳು ಬೆಳೆದು ಹೊಟ್ಟೆ ಒಳಗಿನಿಂದಲೆ ಜೀವಂತ ಮರಿಗಳು ಹೊರಬರುತ್ತವೆ.

ತುಮಕೂರು ನಗರ ಹಾಗೂ ಹೊರವಲಯಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಂಜೆ ಕತ್ತಲು ಸಮಯದಲ್ಲಿ ಟಾರ್ಚ್ ಬಳಸಿ ಹಾಗೂ ಶೂ ಗಳನ್ನು ಧರಿಸುವ ಮುನ್ನ ಪರೀಕ್ಷಿಸಿ ಎಂದು ತಿಳಿಸಿದರು.
ಯಾವುದೇ ರೀತಿಯ ಹಾವುಗಳು ಕಂಡು ಬಂದರೆ ವಾರ್ಕೊ ಸಂಸ್ಥೆಯ ಸಹಾಯವಾಣಿಗೆ 9964519576 ಕರೆಮಾಡಬಹುದು ಎಂದು ತಿಳಿಸಿದ್ದಾರೆ.
– ಕೆ.ಬಿ.ಚಂದ್ರಚೂಡ