ತುಮಕೂರು-ವೀರಶೈವ ಧರ್ಮ ಸಮ್ಮೇಳನ- ಏ.29 ಮತ್ತು 30 ರಂದು ಮೂವರು ಮಹಾತ್ಮರುಗಳ ಜಂಟಿ ಉತ್ಸವ

ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ, ವೀರಶೈವ ಸಮಾಜದ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವದ ಅಂಗವಾಗಿ ನಾಳೆಯಿಂದ ಏ.29 ಮತ್ತು 30 ರಂದು ವೀರಶೈವ ಧರ್ಮ ಸಮ್ಮೇಳನ ಹಾಗೂ ಮೂವರು ಮಹಾತ್ಮರುಗಳ ಜಂಟಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಜಿ.ಚಂದ್ರಮೌಳಿ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏ.29ರ ಸಂಜೆ 6 ಗಂಟೆಗೆ ವೀರಶೈವ ಕಲ್ಯಾಣ ಮಂಟಪ, ಜೆ.ಸಿ.ರಸ್ತೆ, ತುಮಕೂರು ಇಲ್ಲಿ ನಡೆಯಲಿರುವ ವೀರಶೈವ ಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಎಲ್.ರೇವಣಸಿದ್ದಯ್ಯ ಅವರು ನೆರವೇರಿಸುವರು.

ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಜಿ.ಚಂದ್ರಮೌಳಿ ವಹಿಸುವರು. ಕೇಂದ್ರ ಸಚಿವ ವಿ.ಸೋಮಣ್ಣ, ಜಿ.ಎಸ್.ಬಸವರಾಜು, ಎಸ್.ಶಿವಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಅಧ್ಯಕ್ಷರಾದ ಕೋರಿ ಮಂಜುನಾಥ್ ಅವರುಗಳು ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸಿ.ವಿ.ಮಹಾದೇವಯ್ಯ, ಟಿ.ಕೆ.ನಂಜುಂಡಪ್ಪ, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಬಿ.ಶೇಖರ್ ಅವರುಗಳು ಆಗಮಿಸುವರು. ಏ.30 ರಂದು ಮಧ್ಯಾಹ್ನ 3.30ಕ್ಕೆ ಅರಳೇಪೇಟೆ ಶ್ರೀ ಬಸವೇಶ್ವರ ದೇವಾಲಯದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ವೈಭವದ ಜಂಟಿ ಉತ್ಸವ ನಡೆಯಲಿದೆ.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಗಳು ಉತ್ಸವದ ಉದ್ಘಾಟನೆ ನೆರವೇರಿಸುವರು. ಶ್ರೀ ಚನ್ನಬಸವರಾಜೇಂದ್ರ ಸ್ವಾಮಿಗಳು, ಶ್ರೀ ಅಟವೀ ಶಿವಲಿಂಗ ಸ್ವಾಮಿಗಳು, ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಂಗಾಧರ ಸ್ವಾಮಿಗಳು, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಶ್ರೀ ಕಾರದ ವೀರಬಸವ ಸ್ವಾಮಿಗಳು, ಶ್ರೀ ಚಂದ್ರಶೇಖರ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಬಸವಲಿಂಗ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು ಎಂದವರು ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕೋರಿ ಮಂಜಣ್ಣ, ಟಿ.ಸಿ.ಓಹಿಲೇಶ್ವರ್, ಕೆ.ವೈ.ಸಿದ್ಧಲಿಂಗಮೂರ್ತಿ, ಮಲ್ಲಿಕಾರ್ಜುನಯ್ಯ, ಬಿ.ಎಸ್.ಮಂಜುನಾಥ್, ಟಿ.ವಿ.ಹರೀಶ್, ಡಿ.ಜೆ.ಶಶಿಧರನ್, ಜಿ.ಕೆ.ಸ್ವಾಮಿ, ಟಿ.ಆರ್.ನಟರಾಜು, ಆರ್.ಪ್ರಭು, ಮಹೇಶ್ ಬಾಬು, ವಿನಯ್, ಉಮೇಶ್, ಕುಮಾರಸ್ವಾಮಿ, ಕೆ.ಯು.ನಿಶ್ಚಲ್, ಕೆ.ಎಸ್.ವಿಶ್ವನಾಥ್, ಎಸ್.ವಿ.ತಿಪ್ಪೇಸ್ವಾಮಿ, ಮೆಳೇಹಳ್ಳಿ ಆನಂದ್, ಶೀಲಾಸೋಮಸುಂದರ್, ಎನ್.ಆರ್.ಶಶಿಧರ್, ಎಸ್.ವಿ. ಅಂಬಿಕ ಅವರುಗಳು ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?