ತುಮಕೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಘಟಕದಿಂದ ಈ ತಿಂಗಳ 11ರಂದು ನಗರದ ಬಾವಿಕಟ್ಟೆಕಲ್ಯಾಣ ಮಂಟಪದಲ್ಲಿ ಸೇವಾದೀಕ್ಷಾ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ವೀರಶೈವ ಲಿಂಗಾಯತರಲ್ಲಿ ಸಾಮಾಜಿಕ, ಧರ್ಮಜಾಗೃತಿ, ಐಕ್ಯತೆ ಹಾಗೂ ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸಿ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಹಾನಗಲ್‌ನ ಶ್ರೀಕುಮಾರಸ್ವಾಮೀಜಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನುರಾಷ್ಟç ಮಟ್ಟದಲ್ಲಿ ಸ್ಥಾಪಿಸಿದರು.೧೨೦ ವರ್ಷಗಳಿಂದಲೂ ಸಮಾಜದ ಏಳಿಗೆಗೆ ಮಹಾಸಭೆ ಶ್ರಮಿಸುತ್ತಿದೆ ಎಂದರು.
ಐದು ವರ್ಷಕ್ಕೊಮ್ಮೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಆಯ್ಕೆಯಾದ ಪದಾಧಿಕಾರಿಗಳು ಮಹಾಸಭೆಯ ಸೇವಾದೀಕ್ಷೆ ಪಡೆದು ಕಾಯಕ ನಿರತವಾಗುವುದು ಮಹಾಸಭೆಯ ಪರಂಪರೆ.ಅದರಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಹಾಸಭೆಯ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಸೇವಾದೀಕ್ಷೆ ಪಡೆಯುವ ಕಾರ್ಯಕ್ರಮವನ್ನು ಇದೇ 11ರಂದು ಬೆಳಿಗ್ಗೆ 10.30ಕ್ಕೆ ನಗರದ ಬಾವಿಕಟ್ಟೆಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರ ಉಪಸ್ಥಿತಿಯಲ್ಲಿ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ಗುರುಪರದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು, ಈಶ್ವರಖಂಡ್ರೆ, ಸಭಾದರಾಜ್ಯಾಧ್ಯಕ್ಷ ಶಂಕರ್ ಬಿದರಿ, ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಡಾ.ಎಸ್.ಪರಮೇಶ್ ತಿಳಿಸಿದರು.

ಸೇವಾದೀಕ್ಷಾಕಾರ್ಯಕ್ರಮಕ್ಕೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಡಾ.ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಮಠದಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಕಾರದ ವೀರಬಸವ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳು ಆಗಮಿಸುವರು ಎಂದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ ಮೊದಲಾದವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು.
ಈ ವೇಳೆ 18 ಮಂದಿ ಸಾಧಕರಿಗೆ ಸನ್ಮಾನ, ವಿವಿಧ ಪ್ರಶಸ್ತಿ ಪುರಸ್ಕೃತರಿಗೆಗೌರವ ಸಮರ್ಪಣೆ ಮಾಡಲಾಗುವುದು. ವೀರಶೈವ ಅಭಿವೃದ್ಧಿ ಲಿಂಗಾಯತ ನಿಗಮದ ಅಧ್ಯಕ್ಷ ವಿಜಯಾನಂದಕಾಶಪ್ಪನವರ್, ಶಾಸಕರಾದ ಷಡಕ್ಷರಿ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರಾದ ಎಸ್.ಶಿವಣ್ಣ, ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕರಾದ ನಂಜಾಮರಿ, ಕಿರಣ್‌ಕುಮಾರ್ ಮತ್ತಿತರ ಮುಖಂಡರು ಭಾಗವಹಿಸುವರು ಎಂದು ಡಾ.ಪರಮೇಶ್ ಹೇಳಿದರು. ಎಲ್.ಪಿ.ರವಿಶಂಕರ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ಟಿ.ಎಂ.ವಿಜಯಕುಮಾರ್, ಟಿ.ಎಸ್.ರುದ್ರಪ್ರಸಾದ್,ಡಾ.ದರ್ಶನ್‌ಕೆ.ಎಲ್, ಮಮತಾದಿವಾಕರ್, ಎನ್.ಜಯಣ್ಣ, ಸದಾಶಿವಯ್ಯ, ವಿಶ್ವನಾಥ್, ಸತ್ಯಮಂಗಲಜಗದೀಶ್, ಉಮಮಹೇಶ್, ಡಿ.ಎನ್.ಯೋಗೀಶ್ವರ್, ಶ್ರೀಧರ್, ರಾಜಶೇಖರ್ ಮೊದಲಾದವರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ