ತುಮಕೂರು-ಮಹಿಳೆಯರು-ಸ್ವಉದ್ಯೋಗ-ಕೈಗೊಂಡು-ಆರ್ಥಿಕವಾಗಿ- ಸಬಲೀಕರಣವಾಗಬೇಕು-ನ್ಯಾ.ನೂರುನ್ನೀಸ


ತುಮಕೂರು: ಮಹಿಳೆಯರು ಸ್ವಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕು, ಪತಿಯು ಪತ್ನಿಗೆ ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ತಿಳಿಸಿದರು.

ಅವರು ಇಂದು ನಗರದ ಸಿದ್ಧಿ ವಿನಾಯಕ ಸಮುದಾಯಭವನದಲ್ಲಿ ನಡೆದ ಗೀತಾ ಫ್ಯಾಷನ್ ಡಿಸೈನಿಂಗ್ ಅಕಾಡೆಮಿಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಪ್ರತಿ ಮಹಿಳೆಯು ಆತ್ಮವಿಶ್ವಾಸದೊಂದಿಗೆ ಗುರಿಯತ್ತ ಹೆಜ್ಜೆ ಹಾಕಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ,ಹೆಣ್ಣು ಅಸಾಯಕ ಸ್ಥಿತಿಗೆ ತಲುಪಬಾರದು,ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು,ಮೊಳಕೆಕಾಳು,ತಾಜಾ ತರಕಾರಿ ಸೇವಿಸಬೇಕು ಆರೋಗ್ಯವೇ ಭಾಗ್ಯ,ಸಕಾರಾತ್ಮಕವಾಗಿ ಯೋಚಿಸಿದಾಗ ಗೆಲುವು ನಮ್ಮದಾಗುತ್ತದೆ,ಕುಟುಂಬದೊಂದಿಗೆ ಚೆನ್ನಾಗಿದ್ದು ಕಷ್ಟಗಳನ್ನು ಮೆಟ್ಟಿನಿಂತು ಹೋರಾಟ ಮಾಡಿದಾಗ ಪೂರ್ಣ ಫಲದೊಂದಿಗೆ ಮುನ್ನಡೆಯಬೇಕು. ಹೆಣ್ಣು ಏನು ಬೇಕಾದರೂ ಸಾಧಿಸಬಹುದು ಆದರೆ ಅದಕ್ಕೆ ತಕ್ಕ ಪ್ರಯತ್ನ,ಗುರಿ,ಬೆಂಬಲ ಅಗತ್ಯ,ಹೆಣ್ಣು ಮನೆ ಒಳಗೆ ಮತ್ತು ಹೊರಗೆ ದುಡಿಯುತ್ತಿರುವುದು ಶ್ಲಾಘನೀಯ,ಹೆಣ್ಣು ಮಗಳಾಗಿ,ಹೆಂಡತಿಯಾಗಿ,ತಾಯಿಯಾಗಿ ಕೆಲಸ ನಿರ್ವಹಿಸಿ ಉತ್ತಮ ಸಮಾಜ ನಿರ್ಮಾಣದ ಹೊಣೆ ಹೊತ್ತಿದ್ದಾಳೆ ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರೇಖಾಶಿವಕುಮಾರ್, ಒಬ್ಬರು ನಾಯಕರಾಗುವುದಲ್ಲ ಒಬ್ಬ ನಾಯಕ ನೂರು ಜನ ನಾಯಕರನ್ನಾಗಿ ಮಾಡುವುದು ಸಾಧನೆ ಅಂತಹ ಕೆಲಸವನ್ನು ಗೀತಾಶಿವರಾಮ್ ರವರುಮಾಡಿದ್ದಾರೆ, ಹೆಣ್ಣು ಸಾಧಕಿಯಾಗಬೇಕು,ಫ್ಯಾಶನ್ ಡಿಸೈನ್‌ಗೆ ಉತ್ತಮ ಮಾರುಕಟ್ಟೆ ಇದೆ ಅದನ್ನು ಉಪಯೋಗಿಸಿಕೊಂಡು ಸ್ಪರ್ಧಾತ್ಮಕವಾಗಿ ಬೆಳೆದು ಉತ್ತಮ ಸಾಧನೆ ಮಾಡಿ ಎಂದು ಕರೆ ನೀಡಿದರು.


ವಸ್ತ್ರ ವಿನ್ಯಾಸಗಾರ ಉಮಸುದರ್ಶನ್ ಮಾತನಾಡಿ, ಕಲಿತ ವಿದ್ಯೆಯನ್ನು ಸದಾ ಬೇರೆಯವರಿಗೆ ಧಾರೆಯರಿಯಬೇಕು,ಯುವತಿಯರು ಚಿಕ್ಕ ವಯಸ್ಸಿನಲ್ಲಿ ಟೈಲರಿಂಗ್ ಫ್ಯಾಶನ್ ಡಿಸೈನ್ ಕಲಿತರೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.


ನಿವೃತ್ತ ಮುಖ್ಯೋಪಾಧ್ಯಾಯ ವಸಂತರವರು ಮಾತನಾಡಿ, ಮಹಿಳೆಯರು ಹೆಚ್ಚು ದುಡಿದು ಕಡಿಮೆ ವೆಚ್ಚಮಾಡಿ ಹೆಚ್ಚು ಹೆಚ್ಚು ಉಳಿತಾಯ ಮಾಡಬೇಕು,ಕುಟುಂಬ ನಿರ್ವಹಣೆಗೆ ಹಣ ಅತ್ಯವಶ್ಯ,ಒಂದು ಉದ್ಯಮ ಬೆಳೆಯಬೇಕೆಂದರೆ ಕಠಿಣ ಪರಿಶ್ರಮ,ಧೈರ್ಯ ಬೇಕು,ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರಿಗೆ ಆಸ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಗೀತಾಶಿವರಾಮ್, ನಾನು ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೂ ನನಗೆ ತುಡಿತವಿದ್ದದ್ದು ಫ್ಯಾಶನ್ ಡಿಸೈನಿಂಗ್ ಕಡೆ ಆಗಾಗಿ ನಾಡು ಈ ಕ್ಷೇತ್ರಕ್ಕೆ ಬಂದು ಕಳೆದ 2 ವರ್ಷಗಳಲ್ಲಿ ನೂರಾರು ಜನ ಮಹಿಳೆಯರಿಗೆ ಟೈಲರಿಂಗ್ ಫ್ಯಾಶನಿಂಗ್ ಡಿಸೈನ್ ಹೇಳಿಕೊಟ್ಟು ಅವರ ಜೀವನ ನಿರ್ವಹಣೆಗೆ ನೆರವು ನೀಡಿದ್ದೇವೆ,ಪ್ರತಿಯೊಬ್ಬರು ಸುಂದರವಾಗಿ ಮತ್ತು ಚೆನ್ನಾಗಿ ಕಾಣಲು ಉತ್ತಮ ಬಟ್ಟೆಗಳ ಅವಶ್ಯಕತೆವಿದೆ ಫ್ಯಾಶನ್ ಡಿಸೈನರ್‌ಗಳು ಅವಶ್ಯಕತೆ ಇದೆ,ಮಾರುಕಟ್ಟೆ ಚೆನ್ನಾಗಿ ಇದೆ ಪ್ರತಿ ವಿದ್ಯಾರ್ಥಿಯು ಫ್ಯಾಶನ್ ಡಿಸೈನ್ ಕಲಿತು ಉತ್ತಮ ಉದ್ಯಮ ಪ್ರಾರಂಭಿಸಿ ಮಹಿಳೆಯರಿಗೆ ಕೆಲಸ ನೀಡಿ ಅವರ ನೆರವಿಗೆ ಧಾವಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಅನುಸೂಯಮ್ಮ,ರೇಖಾ,ರಾಣಿ,ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ್

Leave a Reply

Your email address will not be published. Required fields are marked *

× How can I help you?