ತುಮಕೂರು-ಗ್ರಾಮಗಳ ಮಟ್ಟದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿತು, ಅವರ ತೊಂದರೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಹುಟ್ಟುಹಾಕಿರುವ ‘ಕರ್ನಾಟಕ ಪ್ರಗತಿಪರ ರೈತರು ಮತ್ತು ದೇವರಾಯನದುರ್ಗ ಜೀವ ವೈವಿಧ್ಯ ರಕ್ಷಣಾ ಸಮಿತಿ’ಯ ಉದ್ಘಾಟನಾ ಕಾರ್ಯಕ್ರಮ ಅ. 27 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಹೊರವಲಯದ ದೇವರಾಯನ ದುರ್ಗ ಕ್ರಾಸ್ ಬಳಿ ಇರುವ ದುಂಡಿ ಮ್ಯಾಂಗೊ ಮಿಸ್ಟ್ ರೆಸಾರ್ಟ್ನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಾಧೀಶರಾದ ಆರ್.ಎನ್. ನಟರಾಜು ಭಾಗವಹಿಸಲಿದ್ದು,ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ. ಲಲಿತನಾಯಕ್ ವಹಿಸುವರು.
ವಿಶೇಷ ಆಹ್ವಾನಿತರಾಗಿ ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ, ಮಾಜಿ ಶಾಸಕ ಡಿ.ಸಿ. ಗೌರಿಶಂಕರ್, ಹೈಕೋರ್ಟ್ ವಕೀಲರಾದ ಆರ್. ಸುಬ್ರಹ್ಮಣ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಹಿರಿಯ ಪತ್ರಕರ್ತ ಜಗನ್ನಾಥ್ ಕಾಳೇನಹಳ್ಳಿ ಪಾಲ್ಗೊಳ್ಳಲಿದ್ದಾರೆ ಎಂದು ವಕೀಲ ಹಾಗೂ ಸಂಘಟನೆಯ ಮಹಾಪೋಷಕರಾದ ರಮೇಶ್ನಾಯಕ್ ಹಾಗೂ ರವೀಂದ್ರ ಬಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.