ತುಮಕೂರು:ತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಈ ತಿಂಗಳ 10 ಮತ್ತು 11ರಂದು ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೋತ್ಸವ,ಮಠಾಧ್ಯಕ್ಷರಾದ ಅಟವೀ ಶಿವಲಿಂಗಸ್ವಾಮೀಜಿಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವ
ವಿಜೃಂಭಣೆಯಿoದ ಏರ್ಪಾಟಾಗಿದೆ.
ಶ್ರೀ ಮಠದ ಅಧ್ಯಕ್ಷರಾದ ಅಟವಿ ಶಿವಲಿಂಗ ಸ್ವಾಮೀಜಿ ಶುಕ್ರವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಈ ಭಕ್ತಿ,ಸಡಗರದ ಕಾರ್ಯಕ್ರಮದ ಜೊತೆಗೆ ಕಾರ್ತಿಕ ಲಕ್ಷದೀಪೋತ್ಸವ,ರೊಟ್ಟಿ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
10ರಂದು ಬೆಳಿಗ್ಗೆ 8.30ಕ್ಕೆ ಷಟ್‌ಸ್ಥಲ ಧ್ವಜಾರೋಹಣದೊಂದಿಗೆ ಆರoಭವಾಗುವ ಕಾರ್ಯಕ್ರಮದಲ್ಲಿ ಮಹಾಂತಲಿoಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು.
ಬೆಳಿಗ್ಗೆ 9 ಗಂಟೆಗೆ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ಅಧ್ಯಕ್ಷತೆಯ ಧರ್ಮಸಭಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ,ಸಿದ್ಧರಬೇಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ,ಕೂಡಲದ ಗುರು ನಂಜೇಶ್ವರ ಮಠದ ಗುರುಮಹೇಶ್ವರ ಶಿವಚಾರ್ಯ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್,ಸಹಕಾರ ಸಚಿವ ಕೆ.ಎನ್.ರಾಜಣ್ಣ, ಅರಣ್ಯ ಸಚಿವ ಈಶ್ವರ ಖಂಡ್ರೆ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್‌ಗೌಡ ಮೊದಲಾದವರು ಭಾಗವಹಿಸುವರು ಎಂದರು.
ತಾವು ಶ್ರೀ ಮಠದ ಐದನೇ ಪೀಠಾಧಿಪತಿಯಾಗಿ ಶ್ರೀ ನಿರಂಜನ ಪಟ್ಟಾಧಿಕಾರವನ್ನು ಮಾಡಿ ಶೂನ್ಯಪೀಠ ಅಲಂಕರಿಸಿ 25 ವರ್ಷಗಳು ಸಂದಿವೆ.ಇದರ ಅಂಗವಾಗಿ ಮಠದ ಭಕ್ತರು ತಮ್ಮ ಪಟ್ಟಾಧಿಕಾರದ ರಜತ ಮಹೋತ್ಸವವನ್ನು 11ರಂದು ಆಯೋಜಿಸಿದ್ದಾರೆ. ಇದಲ್ಲದೆ ಅಂದು ಶ್ರೀ ಮಠದ ಉತ್ತರಾಧಿಕಾರಿಯಾದ ಅಟವೀ ಮಲ್ಲಿಕಾರ್ಜುನ ದೇವರ ಚರಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು.
ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ, ಮಠದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್ ಮಾತನಾಡಿ, ಎರಡು ದಿನಗಳ ಈ ಕಾರ್ಯಕ್ರಮಕ್ಕೆ 15 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಎಲ್ಲರಿಗೂ ದಾಸೋಹ ಮತ್ತಿತರ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ. ಇದರ ಅಂಗವಾಗಿ ಈ ಎರಡು ದಿನಗಳ ಕಾಲ ಕಾರ್ತಿಕ ಕ್ಷದೀಪೋತ್ಸವ, ರೊಟ್ಟಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಗಳ ಪೂಜ್ಯರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಅಟವೀ ಮಲ್ಲಿಕಾರ್ಜುನ ದೇವರು ಸ್ವಾಮೀಜಿ, ಅಟವೀ ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಬೆಟ್ಟಯ್ಯ, ಜಗದೀಶ್ಚಂದ್ರ, ಪಿ.ರವಿಶಂಕರ್,ಮoಜುನಾಥ್ ಬದ್ನಾಳ್, ರಾಜೇಂದ್ರಕುಮಾರ್, ವಿಶ್ವನಾಥ್ ಅಪ್ಪಾಜಪ್ಪ,ಚಂದ್ರಶೇಖರ್, ಟಿ.ಆರ್.ಅನುಸೂಯಮ್ಮ, ಬಾಲಚಂದ್ರ, ಶ್ರೀಧರ್ ಹಿರೇತೊಟ್ಲುಕೆರೆ ಹಾಜರಿದ್ದರು.