ಕೊರಟಗೆರೆ;- ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳನ್ನ ಕಂಡು ವಾಲ್ಮೀಕಿ ನಗರದ ಜನರು ಭಯಭೀತಿರಾದ ಘಟನೆ ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಪಟ್ಟಣದ 15ನೇ ವಾರ್ಡಿನ ವಾಲ್ಮೀಕಿ ನಗರಕ್ಕೆ ಎರಡು ಕರಡಿಗಳ ಬಂದು ಅಲ್ಲಿನ ಜನರಲ್ಲಿ ಆತಂಕ ಸೃಷ್ಠಿಯಾದ ಘಟನೆ ನಡೆದಿದ್ದು, ಏಕಾಏಕಿ ವಾಲ್ಮೀಕಿ ನಗರಕ್ಕೆ ಆಗಮಿಸಿದ ಕರಡಿಗಳ ಹಿಂಡನ್ನ ನೋಡಿದ ಸಾರ್ವಜನಿಕರು ಮನೆಯೊಳಗೆ ಹೋಗಿದ್ದಾರೆ, ಸುಮಾರು 1೦ ಗಂಟೆಯವರೆಗೂ ಕರಡಿಗಳು ಅಲ್ಲಿಯೇ ಓಡಾಡುತ್ತಿದ್ದವು, ಪಟ್ಟಣದ ಹೊರವಲಯದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಸಂಜೆ ಆದರೆ ಸಾಕು ಕರಡಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುವಂತೆ ಮಾಡಿವೆ.

ಕರಡಿ ಬಂದಿರುವ ಮಾಹಿತಿಯನ್ನ ಅರಣ್ಯ ಇಲಾಖೆಯ ಆರ್‌ಎಫ್‌ಒ ಸುರೇಶ್ ಅವರಿಗೆ ತಿಳಿಸಿದ ತಕ್ಷಣ ಸಿಬ್ಬಂದಿಗಳು ಆಗಮಿಸಿ ಪಟಾಕಿ ಸಿಡಿಸಿ ಕರಡಿಗಳು ಅಲ್ಲಿಂದ ಹೋಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಪದೇಪದೇ ಕರಡಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಅಧಿಕಾರಿಗಳು ಬೋನುಗಳನ್ನ ಇಟ್ಟು ಕರಡಿಗಳನ್ನ ಸೆರೆ ಹಿಡಿಯುವಂತೆ ವಾಲ್ಮೀಕಿ ನಗರದ ಜನರು ಮನವಿ ಮಾಡಿದ್ದಾರೆ.
– ಶ್ರೀನಿವಾಸ್ .