ಕೊರಟಗೆರೆ : ಜಲಜೀವನ್ ಮಿಷನ್ ಯೋಜನೆ ಅಡಿ ಕೂಲಿ ಆರಿಸಿ ಬಂದಿದ್ದ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರಿಬ್ಬರು ದ್ವಿಚಕ್ರವಾರದಲ್ಲಿ ಬಿದ್ದು ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ದುರ್ಘಟನೆ ಕೊರಟಗೆರೆ ತಾಲೂಕಿನಲ್ಲಿ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಹನುಮಂತಯ್ಯನ ಪಾಳ್ಯ ಕ್ರಾಸ್ ನ ಬಳಿ ಈ ದುರ್ಘಟನೆ ನಡೆದಿದೆ, ಬಳ್ಳಾರಿ ಮೂಲದ ಸಿರಗುಪ್ಪ ಸಣ್ಣಮಾರಪ್ಪ ಹಾಗೂ ಶಾರುಕ್ ಎಂಬ ಕೂಲಿಕಾರ್ಮಿಕರೇ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.
ಮೃತ ಸಣ್ಣಮಾರಪ್ಪ ಹಾಗೂ ಶಾರುಖ್ ಎಂಬುವರು ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ವುಜ್ಜನಕುರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರ್ಮಿಕರಾಗಿದ್ದು, ಇವರು ದಿನಬಳಕೆ ಅಡುಗೆ ಸಾಮಗ್ರಿಗಳನ್ನ ಕೊಂಡುಕೊಂಡು ಬರುವ ಸಂದರ್ಭದಲ್ಲಿ ಹನುಮಂತಯ್ಯನ ಪಾಳ್ಯ ಕ್ರಾಸ್ ನ ಬಳಿ ಆಯತಪ್ಪಿ ದ್ವಿಚಕ್ರ ವಾಹನ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಕೂಲಿಕಾರ್ಮಿಕರು ಡಾಂಬರೀಕರಣದ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ಸಾವಿಗಿಡಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಪಿಎಸ್ಐ ರೇಣುಕಾ ಯಾದವ್ ಹಾಗೂ ಯೋಗೇಶ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್ ಕೊರಟಗೆರೆ