ತುಮಕೂರು: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಸರುಮಡು ಗ್ರಾಮಪಂಚಾಯತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು ಉಮೇಶ್(ಆನಂದ್)ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷ ಉಮೇಶ್ ಗ್ರಾಮಾಂತರ ಕ್ಷೇತ್ರದ ಶಾಸಕ,ರಾಜಕೀಯ ಚತುರ ಬಿ.ಸುರೇಶ್ ಗೌಡರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಆಶೀರ್ವಾದ ಪಡೆದರು.
ಪತ್ರಕರ್ತರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಉಮೇಶ್ ರವರು ನಾನು ಶಾಸಕ ಬಿ.ಸುರೇಶ್ ಗೌಡರ ಆಶೀರ್ವಾದದಿಂದ ಅವಿರೋಧವಾಗಿ ಪಿ.ಎಲ್.ಡಿ.ಬ್ಯಾಂಕ್ ನ ನಿರ್ದೇಶಕನಾಗಿದ್ದು ನಂತರ ಇಂದು ಪುನಃ ಶಾಸಕ ಬಿ.ಸುರೇಶ್‌ಗೌಡರ ಆಶೀರ್ವಾದದಿಂದ ಇಂದು ನಾನು ಕೆಸರುಮಡು ಗ್ರಾಮಪಂಚಾಯತ್ ನ ಅಧ್ಯಕ್ಷರಾಗಿದ್ದೇನೆ ಇದಕ್ಕಾಗಿ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಿ.ಜಿ.ಮಾರೇಗೌಡ,ಸಂಪತ್ ಕುಮಾರ್, ಶ್ರೀಧರ್, ಶಶಿ, ಜಗದೀಶ್, ಮಲ್ಲಿಕಾರ್ಜುನ್, ನಾಗಣ್ಣ, ಮಂಜುನಾಥ್, ಮುನಿರಾಜು (ಪಿ.ಎಲ್.ಡಿ.ಬ್ಯಾ೦ಕ್ ನಿರ್ದೇಶಕರು) ಪ್ರಸನ್ನ ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ