ತುಮಕೂರು– ತುಮಕೂರು ಚಿಕ್ಕಪೇಟೆಯಲ್ಲಿರುವ ಹಿರೇಮಠಕ್ಕೆ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣನವರು-ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೆ ಭೇಟಿ ನೀಡಿ ಮಠಾಧ್ಯಕ್ಷ ಡಾ.ಶ್ರೀಶಿವಾನಂದ ಶಿವಾಚಾರ‍್ಯ ಸ್ವಾಮೀಜಿಯವರಿಗೆ 64 ನೇ ಜನ್ಮದಿನದ ಶುಭಾಶಯ ಕೋರಿ ಪೂಜ್ಯರಿಂದ ಆಶೀರ್ವಾದ ಪಡೆದರು.
ಈ ವೇಳೆ ರವಿಶಂಕರ್ ಹೆಬ್ಬಾಕ, ಹಿರಿಯ ಬಿಜೆಪಿ ಮುಖಂಡರಾದ ಕೊಪ್ಪಲ್ ನಾಗರಾಜ್, ಬಾವಿಕಟ್ಟೆ ಗಣೇಶ್ ಮತ್ತಿತರರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ