ತುಮಕೂರು: ನಗರದ ಹಿರೇಮಠದಲ್ಲಿ ಮಲ್ಲಿಕಾರ್ಜುನಸ್ವಾಮಿಯ ಪುನ: ಪ್ರತಿಷ್ಠಾಪನಾ ಮಹೋತ್ಸವ, ವಿದ್ಯಾರ್ಥಿ ವಸತಿ ನಿಲಯ ಮತ್ತುದಾಸೋಹ ಭವನದ ಉದ್ಘಾಟನೆ ಅಂಗವಾಗಿ ಮೂರು ದಿನಕಾಲ ನಡೆದಿರುವ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಶ್ರೀಮಠದ ಅಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ, ಪೂಜಾ ವಿಧಿ-ವಿಧಾನಗಳು ನೆರವೇರಿದವು.
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಕಳಶ, ಸಪ್ತಸಭಾ, ದಶದಿಕ್ಪಾಲಕರು, ಏಕಾದಶರುದ್ರರು, ದ್ವಾದಶಾದಿತ್ಯರು, ಸಪ್ತಚಿರಂಜೀವಿಗಳು, ಸಪ್ತಮಾತೃಕಾ, ಅಧಿದೇವತಾ ಸಹಿತಆದಿತ್ಯಾದಿ ನವಗ್ರಹ, ಮೃತ್ಯುಂಜಯ, ಉಮಾಮಹೇಶ್ವರ, ಲಕ್ಷ್ಮೀ ನಾರಾಯಣ, ಪ್ರಧಾನ ಮಲ್ಲಿಕಾರ್ಜುನಸ್ವಾಮಿಯ ಕಲಶಾರಾಧನೆ ಏರ್ಪಡಿಸಲಾಗಿತ್ತು.

ಇದಕ್ಕೂ ಮೊದಲು ಪ್ರತಿಷ್ಠಾಪಿಸಲಿರುವ ಮಲ್ಲಿಕಾರ್ಜುನ ಸ್ವಾಮಿ, ನಂದಿ ಮೂರ್ತಿಗಳಿಗೆ ಜಲ ಮಡಿ ಮುಗಿಸಿ ಮೆರವಣಿಗೆಯಲ್ಲಿ ಮಠಕ್ಕೆತರಲಾಯಿತು.ಗಾರ್ಡನ್‌ರಸ್ತೆಯ ಶನೇಶ್ಚರ ಸ್ವಾಮಿದೇವಸ್ಥಾನದ ಬಳಿಯ ಬಾವಿಯಲ್ಲಿ ಮೂರ್ತಿಗಳಿಗೆ ಮಡಿ ಮಾಡಿದ ಮೂರ್ತಿಗಳನ್ನು ಗಂಗೆಯೊಂದಿಗೆ ಪೂರ್ಣಕುಂಭ, ಮಂಗಳವಾದ್ಯ, ವೀರಗಾಸೆ ಪ್ರದರ್ಶನದೊಂದಿಗೆ ಭಕ್ತಿಯಿಂದತರಲಾಯಿತು.
ನಂತರ ಯಾಗಶಾಲಾ ಪ್ರವೇಶದೊಂದಿಗೆ ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಮಹಾರುದ್ರಹೋಮ, ಕಳಾಹೋಮ ನೆರವೇರಿದವು.ಸುನಿಲ್ ಶಾಸ್ತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದಿನವಿಡಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಅಮೃತಾಸ್ತದಿಂದ ಮಲ್ಲಿಕಾರ್ಜುನಸ್ವಾಮಿ, ನಂದೀಶ್ವರ ಸ್ವಾಮಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮೀಲನ ಮತ್ತುಗೋಪುರ ಕಲಶಾರೋಹಣ, ಕುಂಭಾಭಿಷೇಕ, ನಂತರ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ, ಜಯಾದಿ ಹೋಮಗಳು, ನಂತರ ಮಹಾಪೂರ್ಣಾಹುತಿ, ರಾಜೋಪಚಾರಸಹಿತ ಮಹಾಮಂಗಳಾರತಿ ನೆರವೇರಲಿದೆ.
– ಕೆ.ಬಿ.ಚಂದ್ರಚೂಡ